ರಾಗಿ ಜೋಳದ ಬಿಸ್ಕತ್ ಮತ್ತು ರಾಗಿ ಸಿಹಿ ಉಂಡೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ದೊರೆಯುತ್ತಿದೆ. ಬೆಂಗಳೂರಿನ ವ್ಯಾಪ್ತಿಯನ್ನು ವಿಸ್ತರಿಸಲು ಒಕ್ಕೂಟ ಪ್ರಯತ್ನ ಪಡುತ್ತಿದೆ. ಇದಕ್ಕೆ ಸರ್ಕಾರ ಬೆಂಬಲ ನೀಡಬೇಕು
ನೇತ್ರಾಅಧ್ಯಕ್ಷೆ ಮಯೂರಿ ವನಶ್ರೀ ಸ್ತ್ರೀಶಕ್ತಿ ಒಕ್ಕೂಟ
ಉದ್ಯೋಗ ಹುಡಕಬಾರದು ಸೃಷ್ಟಿಸಬೇಕು...
ಮಹಿಳೆಯರು ಉದ್ಯೋಗ ಹುಡುಕದೇ ಉದ್ಯೋಗ ಸೃಷ್ಟಿಸಬೇಕು ಹಾಗೂ ಆರ್ಥಿಕವಾಗಿ ಸಬಲರಾಗಬೇಕೆಂದು ಎರಡು ಉದ್ಯಮ ಆರಂಭಿಸಿದ್ದೇವೆ ಎಂದು ಮಯೂರಿ ವನಶ್ರೀ ಸ್ತ್ರೀಶಕ್ತಿ ಒಕ್ಕೂಟ ಖಜಾಂಚಿ ಗೀತಾ ತಿಳಿಸಿದರು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಹಲವು ಸವಾಲುಗಳ ನಡುವೆಯೂ ಕಾಡಂಚಿನ ಗ್ರಾಮದ ಮಹಿಳಾ ಸ್ವಸಹಾಯ ಒಕ್ಕೂಟ ಕ್ರಿಯಾಶೀಲ ಕಿರು ಉದ್ಯಮದ ಮೂಲಕ ಆರ್ಥಿಕವಾಗಿ ಸದೃಢವಾಗುತ್ತಿದೆ ಎಂದರು.
ಸರ್ಕಾರಿ ಕಾರ್ಯಕ್ರಮಗಳಿಗೆ ಒಕ್ಕೂಟದ ತಿಂಡಿ ತಿನಿಸು
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಇಲಾಖೆ ಕಾರ್ಯಕ್ರಮ ಮತ್ತು ಸಭೆಗಳಲ್ಲಿ ಮಯೂರಿ ವನಶ್ರೀ ಸ್ತ್ರೀಶಕ್ತಿ ಒಕ್ಕೂಟದ ಸಾವಯವ ಬಿಸ್ಕತ್ ರಾಗಿ ಉಂಡೆ ಸೇರಿದಂತೆ ವಿವಿಧ ತಿಂಡಿ ತಿನಿಸು ಬಳಸುವಂತೆ ಸೂಚನೆ ನೀಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್.ಲತಾ ಕುಮಾರಿ ತಿಳಿಸಿದರು.