ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಚೀಟಿಗಳ ಮೂಲಕ ವಿಶ್ವಶಾಂತಿ

ವಿಶ್ವಅಂಚೆ ದಿನ, ಮಹಾತ್ಮ ಗಾಂಧೀಜಿ 150ನೇ ಜನ್ಮದಿನದ ಪ್ರಯುಕ್ತ ಪ್ರದರ್ಶನಕ್ಕೆ ಸಿದ್ಧತೆ
Last Updated 4 ಜುಲೈ 2019, 13:42 IST
ಅಕ್ಷರ ಗಾತ್ರ

ವಿಜಯಪುರ: ಮಹಾತ್ಮ ಗಾಂಧೀಜಿ ಅವರ ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಅಹಿಂಸಾ ತತ್ವ ಎಲ್ಲೆಡೆ ಸಾರಬೇಕು‌. ಅವರ ಗೌರವಾರ್ಥವಾಗಿ ಮುದ್ರಿಸಿರುವ ಅಂಚೆ ಚೀಟಿಗಳನ್ನು ವಿಶ್ವಅಂಚೆ ದಿನ ಹಾಗೂ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಏ

ಪುರಾತನ ಕಾಲದ ನೀರಾವರಿ ಪದ್ಧತಿ, ಬೇಸಾಯದ ವಿಧಾನ, 120ವರ್ಷಗಳ ಹಿಂದೆ ನೀರೆತ್ತಲು ಬಳಸುತ್ತಿದ್ದ ಸ್ವಯಂ ಚಾಲಿತ ಯಂತ್ರ, ಕೃಷಿ ಪರಿಕರ ಸೇರಿದಂತೆ ಕಾಲಾನುಕ್ರಮದಲ್ಲಿ ವಿಶ್ವದ ಕೃಷಿ ಚರಿತ್ರೆ ಮತ್ತು ವರ್ತಮಾನವನ್ನು ಅಂಚೆ ಚೀಟಿಗಳ ಮೂಲಕ ವಿವರಣೆಗಳೊಂದಿಗೆ ಪ್ರದರ್ಶಿಸಿಮೇಲೂರಿನ ಎಂ.ಆರ್.ಪ್ರಭಾಕರ್ ಗಮನ ಸೆಳೆದಿದ್ದಾರೆ.

ಸಿಂಗಪುರ, ಜಪಾನ್ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಅಂಚೆ ಚೀಟಿಗಳನ್ನು ಪ್ರದರ್ಶನ ಮಾಡಿ ಪ್ರಶಸ್ತಿಯೂ ಪಡೆದಿದ್ದಾರೆ. ಅಂಚೆಚೀಟಿ ಸಂಗ್ರಹದ ಜತೆಗೆ ನಾಣ್ಯ- ನೋಟುಗಳ ಸಂಗ್ರಹ, ಸುಂದರ ಹಸ್ತಾಕ್ಷರ ಕಲೆ ಕ್ಯಾಲಿಗ್ರಫಿ ಮತ್ತು ಅಂಚೆ ಚೀಟಿಗಳನ್ನು ಬಳಸಿಕೊಂಡು ಕೊಲಾಜ್ ಬಿಡಿಸುವ ವೈವಿಧ್ಯಮಯ ಹವ್ಯಾಸವೂ ಸಿದ್ಧಿಸಿದೆ. ದೇಶಾದ್ಯಂತ 2300ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿರುವ ಹೆಗ್ಗಳಿಕೆ ಇವರದ್ದು.

ವಿಮಾನಯಾನ, ಮಕ್ಕಳ ಚಿತ್ರಕಲೆ, ವಿಶ್ವಸಂಸ್ಥೆ, ಒಲಿಂಪಿಕ್ ಗೇಮ್ಸ್, ವಿಶ್ವ ಅಂಗವಿಕಲರ ಕಲ್ಯಾಣ, ಅಂಚೆ ಸಾಮಗ್ರಿ, ಪತ್ರಿಕೋದ್ಯಮ, ಅಂಚೆ ಚೀಟಿ ಆವಿಷ್ಕರಿಸಿದ್ದ ಸರ್ ರೊಲ್ಯಾಂಡ್ ಹೆಲ್, ಸ್ಕೌಟ್ಸ್ ಮತ್ತು ಗೈಡ್ಸ್, ಮಾಹಿತಿ ತಂತ್ರಜ್ಞಾನ, ಪ್ರಕೃತಿ, ಪರಿಸರ, ನೃತ್ಯ, ಸಂಗೀತ, ಸಿನಿಮಾ ಹೀಗೆ ಹಲವು ರಂಗಗಳ ಪರಿಚಯವಿರುವ ಅಂಚೆ ಚೀಟಿಗಳ ಸಂಗ್ರಹ ಇವರ ಬಳಿ ಇದೆ.

ಮೈಸೂರು ಅರಸರು, ಟಿಪ್ಪು ಕಾಲದ ನಾಣ್ಯಗಳು, ಅಮೆರಿಕ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್, ಇಟಲಿ, ವಿಯೆಟ್ನಾಂ, ಜೆಕೋಸ್ಲೋವಿಯಾ, ಕೊಲಂಬಿಯಾ, ಬರ್ಮಾ, ಜಪಾನ್, ಕ್ರೋಷಿಯಾ, ಯೆಮೆನ್, ಗ್ರೀಸ್, ಬ್ರೆಜಿಲ್, ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ ನಾಣ್ಯ ಮತ್ತು ನೋಟುಗಳ ಸಂಗ್ರಹವೂ ಇದೆ.

ಗ್ರಾಮಾಂತರ ಜನರಿಗಾಗಿ ಅಂಚೆ ಚೀಟಿ ಸಂಗ್ರಹ ಎಂಬ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದೆ. ಗ್ರಾಮೀಣ ಭಾಗದ ಮಕ್ಕಳು ಮತ್ತು ಜನರಲ್ಲಿ ಅಂಚೆಚೀಟಿ ಮತ್ತು ನಾಣ್ಯ – ನೋಟುಗಳ ಸಂಗ್ರಹದ ಬಗ್ಗೆ ಅರಿವು ಮೂಡಿಸಲು‌ 1978ರಲ್ಲಿ ಪ್ರಥಮ ಬಾರಿಗೆ ಮೇಲೂರಿನಲ್ಲಿ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘ ಸ್ಥಾಪಿಸಿರುವ ಹೆಗ್ಗಳಿಕೆ ಇವರದ್ದು.

ಈ ಸಂಘದ ಮೂಲಕ 2300 ಪ್ರದರ್ಶನಗಳನ್ನು ಗ್ರಾಮೀಣ ಭಾಗದಲ್ಲಿ ಏರ್ಪಡಿಸಿದ್ದಾರೆ. ವಿಶ್ವಶಾಂತಿ, ಸ್ನೇಹ –ಸೌಹಾರ್ದತೆ, ಭಾವೈಕ್ಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು, ಸಂಸ್ಕೃತಿ, ಪರಿಸರ ಪ್ರೇಮ ಹಾಗೂ ಪರಿಸರ ಸಂರಕ್ಷಣೆ ಪ್ರಾಮುಖ್ಯತೆಯನ್ನು ಅಂಚೆ ಚೀಟಿಗಳ ಮೂಲಕ ಪರಿಚಯಿಸುವುದು ಇವರ ಉದ್ದೇಶವಾಗಿದೆ.

ಥಾಯ್ಲೆಂಡ್, ಸಿಂಗಪುರ, ಕೊರಿಯಾ, ಕೆನಡಾ ದೇಶಗಳ ಪದಕ ಮತ್ತು ಪುರಸ್ಕಾರ, ಕರ್ನಾಟಕ ಸರ್ಕಾರದ ಪರಿಸರ ಪ್ರಶಸ್ತಿ, ಬೆಳಗಾವಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ವಿವಿಧ ಪುರಸ್ಕಾರ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT