ಆನೇಕಲ್ : ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಸಹ ಇಂದಿಗೂ ದೇಶದಲ್ಲಿ ಬಡತನ, ದೌರ್ಜನ್ಯಗಳು, ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿವೆ ಎಂದು ದಲಿತ್ ಪ್ಯಾಂಥರ್ಸ್ಸ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಸಿ.ನಾಗರಾಜ್ ನುಡಿದರು.

ಅವರು ತಾಲ್ಲೂಕಿನ ಸಮಂದೂರು ಗೇಟ್ನ ಕೆಂಪೇಗೌಡ ನಗರದಲ್ಲಿ ದಲಿತ್ ಪ್ಯಾಂಥರ್ಸ್ ಆಫ್ ಇಂಡಿಯಾ ಸಂಘಟನೆಯ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ಅಭಿವೃದ್ದಿ ಹೊಂದಿದ್ದರೂ ಸಹ ಇಂದಿಗೂ ದಲಿತ ಸಮುದಾಯದ ಜನರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದೆ.
ಎಲ್ಲಿಯವರೆಗೆ ಎಲ್ಲರೂ ಶಿಕ್ಷಣವನ್ನು ಪಡೆಯುವುದಿಲ್ಲವೋ ಅಲ್ಲಿಯವರೆಗೆ ಇಂತಹ ಕೃತ್ಯಗಳು ನಡೆಯತ್ತವೆ ಎಂದು ಅವರು ಹೇಳಿದರು.
ಯುವ ಸಮುದಾಯ ಅಂಬೇಡ್ಕರ್ ಹಾಗೂ ಪೆರಿಯರ್ರವರ ತತ್ವ ಸಿದ್ಧಾಂತ ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ತಾಲ್ಲೂಕು ಅಧ್ಯಕ್ಷ ಮರಿಯಪ್ಪ ಮೌರ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ದಲಿತ್ ಪ್ಯಾಂಥರ್ಸ್ಸ ಆಫ್ ಇಂಡಿಯಾ ಸಂಘಟನೆಯ ಆಟೋ ಘಟಕಕ್ಕೆ ಚಾಲನೆ ನೀಡಲಾಯಿತು ಹಾಗೂ ಗ್ರಾಮ ಪಂಚಾಯಿತಿ ಸದಸ್ಯನಾಗಿ ನೂತನವಾಗಿ ಆಯ್ಕೆಯಾದ ಮರಿಯಪ್ಪ ಮೌರ್ಯ ಅವರನ್ನು ಅಭಿನಂದಿಸಲಾಯಿತು. ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಶೇಖರ್, ನರೇಂದ್ರಕುಮಾರ್, ಶಾಂತಕುಮಾರ್, ನಂಜಪ್ಪ, ಮಲ್ಲೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.