ಮಂಗಳವಾರ, ಮೇ 24, 2022
28 °C

ಪಿಯು ಪರೀಕ್ಷೆ: 2,323 ವಿದ್ಯಾರ್ಥಿಗಳು ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ 2,323 ವಿದ್ಯಾರ್ಥಿಗಳು ಗೈರುಹಾಜರಾದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಭೌತವಿಜ್ಞಾನ ವಿಷಯ ಪರೀಕ್ಷೆಗೆ 5,764 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 5,612 ವಿದ್ಯಾರ್ಥಿಗಳು ಹಾಜರಾದರು. 152 ವಿದ್ಯಾರ್ಥಿಗಳು ಬರಲಿಲ್ಲ.

ಇತಿಹಾಸ ವಿಷಯಕ್ಕೆ ನೋಂದಾಯಿಸಿದ್ದ 12,210 ವಿದ್ಯಾರ್ಥಿಗಳ ಪೈಕಿ 11,308 ವಿದ್ಯಾರ್ಥಿಗಳು ಹಾಜರಾದರು. 902 ವಿದ್ಯಾರ್ಥಿಗಳು ಗೈರುಹಾಜರಾದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಭೌತವಿಜ್ಞಾನ ಪರೀಕ್ಷೆಗೆ ನೋಂದಾಯಿಸಿದ್ದ 6,642 ವಿದ್ಯಾರ್ಥಿಗಳ ಪೈಕಿ 6,462 ವಿದ್ಯಾರ್ಥಿಗಳು ಹಾಜರಾದರು. 180 ವಿದ್ಯಾರ್ಥಿಗಳು ಗೈರುಹಾಜರಾದರು. ಇತಿಹಾಸಕ್ಕೆ 17,265 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 16,536 ಮಂದಿ ಹಾಜರಾದರು. 1,089 ವಿದ್ಯಾರ್ಥಿಗಳು ದೂರ ಉಳಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು