ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರಾಣಿ ಚನ್ನಮ್ಮ ಸ್ಮಾರಕ ಬಾಲಕಿಯರ ವಸತಿ ಶಾಲೆಯ 47 ಮಂದಿಗೆ ಕೋವಿಡ್

Last Updated 16 ಜನವರಿ 2022, 12:29 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಇಲ್ಲಿನ ರಾಣಿ ಚನ್ನಮ್ಮ ಸ್ಮಾರಕ ಬಾಲಕಿಯರ ವಸತಿ ಸೈನಿಕ ಶಾಲೆಯ ಮೂವರು ಸಿಬ್ಬಂದಿ ಸೇರಿ 47 ವಿದ್ಯಾರ್ಥಿನಿಯರಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದೆ’ ಎಂದು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ತಿಳಿಸಿದರು.

‘ಕಚೇರಿ ಸೂಪರಿಂಟೆಂಡೆಂಟ್‌ ಕೂಡ ಸೋಂಕಿತರಾಗಿದ್ದರೆ ಎಂದು ಗೊತ್ತಾಗಿದೆ. ಇಲ್ಲಿಯವರೆಗೆ 13 ಸಿಬ್ಬಂದಿ ಸೇರಿ 194 ವಿದ್ಯಾರ್ಥಿನಿಯರಿಗೆ ಕೋವಿಡ್ ದೃಢಪಟ್ಟಂತಾಗಿದೆ.

ನಿತ್ಯ ಕೋವಿಡ್ ಸೋಂಕಿತರ ಪಟ್ಟಿ ಬೆಳೆಯುತ್ತಿದ್ದರೂ, ಶಾಲೆಯಿಂದ ಹೊರಗೆ ಹೋಗುವುದು, ಕೆಲವರು ಸಿಬ್ಬಂದಿ ಕೆಲಸಕ್ಕೆ ಒಳಗೆ ಹೋಗುವುದು ನಡೆದೇ ಇದೆ. ಕಟ್ಟಡ ಕಾಮಗಾರಿಯೂ ಯಾವುದೇ ಅಡೆತಡೆಯಲ್ಲಿ ಸಾಗಿದೆ ಎಂದು ತಿಳಿದುಬಂದಿದೆ.

ತಾಲ್ಲೂಕಿನ ಕಾದ್ರೊಳ್ಳಿ ಕುರುಬುರ ತಗ್ಗು ಪ್ರದೇಶದಲ್ಲೂ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT