ಮಂಗಳವಾರ, ಜುಲೈ 5, 2022
24 °C

ತಮಗೆ ನಮಸ್ಕರಿಸಿದ ಶ್ವಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿ ನಮಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿ ಬೆಳಿಗ್ಗೆ ವಾಕಿಂಗ್ ಆರಂಭಿಸಿದ ವೇಳೆ ತಮಗೆ ನಮಸ್ಕರಿಸಿದ ಪೊಲೀಸ್ ಇಲಾಖೆಯ ಶ್ವಾನದಳದ ‘ಸೋನಿ‘ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಗುತ್ತಾ ನಮಸ್ಕರಿಸಿದರು.

ಪೊಲೀಸ್‌ ಸಿಬ್ಬಂದಿ ಸೋನಿಯನ್ನು ಹಿಡಿದು ನಿಂತಿದ್ದರು. ಅವರ ಪಕ್ಕ ನಿಂತಿದ್ದ ಸೋನಿ ಯಡಿಯೂರಪ್ಪ ಅವರು ಸಮೀಪಕ್ಕೆ ಬರುತ್ತಿದ್ದಂತೆ ಮುಂಗಾಲೂರಿ ನಮಸ್ಕರಿಸಿತು. ಸೋನಿ ನಮಸ್ಕಾರ ಮಾಡಿದ್ದನ್ನು ನಗುತ್ತಲೇ ನೋಡಿದ ಯಡಿಯೂರಪ್ಪ ಅವರು, ಸೋನಿಗೆ ಪ್ರತಿ ನಮಸ್ಕಾರ ಮಾಡಿ ಮುಂದೆ ತೆರಳಿದರು. 

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ತೆರಳಲು ಬಂದಿರುವ ಅವರು ಇಲ್ಲಿ ತಂಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.