ಬೆಳಗಾವಿ: ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು, ಅವರ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣ ಕೇಳಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

‘ರೋಹನ್ ಜಗದೀಶ ಐಪಿಎಸ್’ ಹೆಸರಲ್ಲಿ ರೋಹನ್ ಅವರ ಭಾವಚಿತ್ರಗಳನ್ನು ಬಳಸಿ, ವೈಯಕ್ತಿಕ ಮಾಹಿತಿ ಮೂಲಕ ಫೇಸ್ಬುಕ್ ಖಾತೆ ತೆರೆಯಲಾಗಿದೆ. ಇದರ ಮೂಲಕ ಮೆಸೆಂಜರ್ನಲ್ಲಿ ಸಂದೇಶ ರವಾಣಿಸಿ ಹಣದ ನೆರವು ನೀಡುವಂತೆ ಕೇಳಿದ್ದಾರೆ.

ಬೆಳಗಾವಿ ಸಿಇಎನ್ ಠಾಣೆ ಪಿಎಸ್ಐ ಮಂಜುನಾಥ ತಿರಕಣ್ಣವರ ಅವರಿಗೂ ಸ್ನೇಹದ ರಿಕ್ವೆಸ್ಟ್ ಕಳುಹಿಸಿದ್ದಾರೆ. ಅದನ್ನು ಕಂಡು ಮಂಜುನಾಥ ಅವರು ಸಂದೇಹಗೊಂಡರು. ಆಗ ಪ್ರಕರಣ ಬೆಳಕಿಗೆ ಬಂದಿದೆ. ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.