ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಎಸಿಬಿ ದಾಳಿ: ಎಂಜಿನಿಯರ್ ಮನೆಯ ಸ್ನಾನದ ಕೋಣೆಯಲ್ಲಿ ₹5 ಲಕ್ಷ ಪತ್ತೆ

Last Updated 17 ಜೂನ್ 2022, 6:07 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಪಿಡಬ್ಲ್ಯುಡಿ ಅಧೀಕ್ಷಕ ಎಂಜಿನಿಯರ್ ಬಿ.ವೈ.ಪವಾರ್ ಅವರ ಮನೆ, ಕಚೇರಿ ಹಾಗೂ ಅವರ ಒಡೆತನದ ಕಾರ್ಖಾನೆ ಮೇಲೆ ಶುಕ್ರವಾರ ಎಸಿಬಿ ತಂಡ ದಾಳಿ ನಡೆಸಿದೆ.

25ಕ್ಕೂ ಹೆಚ್ಚು ಸಿಬ್ಬಂದಿ ಒಳಗೊಂಡ ಈ ತಂಡ ಏಕಕಾಲಕ್ಕೆ ಆರು ಕಡೆ ದಾಳಿ ಮಾಡಿದೆ. ನಗರದ ಜಕ್ಕೇರಿ ಹೊಂಡದಲ್ಲಿರುವ ಪವಾರ್ ಅವರ ಮನೆ, ಖಾಸಗಿ ಕಚೇರಿ ಹಾಗೂ ಸರ್ಕಾರಿ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೊಂದೆಡೆ, ನಿಪ್ಪಾಣಿ ನಗರದಲ್ಲಿರುವ ಇನ್ನೊಂದು ಮನೆ, ಬೋರಗಾಂವಿನಲ್ಲಿರುವ ಕಾರ್ಖಾನೆ ಮೇಲೂ ದಾಳಿ ಮಾಡಿದ್ದು ತೀವ್ರ ಪರಿಶೀಲನೆ ನಡೆದಿದೆ. ಅವರ ಮನೆಯ ಸ್ನಾನದ ಕೋಣೆಯಲ್ಲಿ ₹5 ಲಕ್ಷ ನಗದು ಪತ್ತೆಯಾಗಿದೆ.

ಬಿ.ವೈ.ಪವಾರ್
ಬಿ.ವೈ.ಪವಾರ್

ಪವಾರ್ ಅವರು ಇದೇ ಜೂನ್ 30 ರಂದು ನಿವೃತ್ತಿಯಾಗಬೇಕಿದೆ. ನಿವೃತ್ತಿ ಅಂಚಿನಲ್ಲಿದ್ದ ಅವರ ಬಳಿ ಅಪಾರ ಪ್ರಮಾಣದ ಆಸ್ತಿ ಹಾಗೂ ಇತರ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT