ಸವದತ್ತಿ: ಹೆಚ್ಚಿನ ಜ್ಞಾಪಕ ಶಕ್ತಿ ಹೊಂದಿದ 19 ತಿಂಗಳಿನ ಮಧುಶ್ರೀ ಎಂಬ ಪುಟಾಣಿಗೆ ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್-2023’ ಪ್ರಶಸ್ತಿ ಲಭಿಸಿದೆ.
ಪ್ರಕಾಶ ಪವಾಡೆಪ್ಪನವರ ಅವರ ಪುತ್ರಿಯಾದ ಈ ಮಗು, ಇಂಗ್ಲಿಷ್ ವರ್ಣಮಾಲೆ, ಕನ್ನಡ ವರ್ಣಲಾಲೆ, 10 ತರಕಾರಿ– ಹಣ್ಣುಗಳ ಹೆಸರು, ದೇಹದ ಭಾಗಗಳ ಹೆಸರು ಹೇಳುವುದು, ದಿನನಿತ್ಯದ 50ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವುದು, 10 ವನ್ಯಪ್ರಾಣಗಳ ಧ್ವನಿ ಅನುಕರಿಸುವುದು ಹೀಗೆ ವೈವಿಧ್ಯಮಯ ಪ್ರತಿಭೆ ಹೊಂದಿದ್ದಾಳೆ. ಮಗುವಿನ ಈ ಪ್ರತಿಭೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.