ಶುಕ್ರವಾರ, ಡಿಸೆಂಬರ್ 4, 2020
24 °C

ಪಟ್ಟಣ ಪಂಚಾಯಿತಿ: ಅಕ್ಕತಂಗೇರಹಾಳ ಗ್ರಾಮಸ್ಥರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಅಕ್ಕತಂಗೇರಹಾಳ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಮುಖಂಡ ಬಸನಗೌಡ ಹೊಳೆಯಾಚಿ ಮಾತನಾಡಿ, ‘ನಮ್ಮ ಗ್ರಾಮ ಕೃಷಿ ಅವಲಂಬಿತವಾಗಿದೆ. ಪಟ್ಟಣವಾದರೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ. ರೈತರ ಮತ್ತು ಬಡವರ ಮಕ್ಕಳಿಗೆ ಗ್ರಾಮೀಣ ಕೃಪಾಂಕ ಮೊದಲಾದ ಶೈಕ್ಷಣಿಕ ಸೌಲಭ್ಯಗಳು ದೊರೆಯುವುದಿಲ್ಲ. ಇದರಿಂದ ಅವರ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಹೀಗಾಗಿ, ಪ್ರಸ್ತಾವ ಕೈಬಿಟ್ಟು ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಿವಾನಂದ ಕರಲಿಂಗಣ್ಣವರ, ಸದಸ್ಯರಾದ ಚನಗೌಡ ಪಾಟೀಲ, ರಾಜಕುಮಾರ ಪಾಟೀಲ, ಶಂಕರ ಬೆಣ್ಣಿ, ಅನ್ನಪ್ಪಾ ನೇಸರಗಿ, ಅಡಿವೇಶ ಮರಲಿಂಗಣ್ಣವರ, ಸಂಜು ಮರಲಿಂಗಣ್ಣವರ, ಕೆ.ಜಿ. ಪಾಟೀಲ, ಸಿಂಗಪ್ಪ ಪಾಟೀಲ, ಬಸವಣ್ಣಿ ಬೆಣ್ಣಿ, ಸೋಮಲಿಂಗ ಹೊಳೆಯಾಚಿ, ಬಸು ಹೆಬ್ಬಾಳ, ಲಿಂಗನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.