ಬೆಳಗಾವಿ: ಇಲ್ಲಿನ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ನಿಂದ ‘ಡಾ.ಬೆಟಗೇರಿ ಕೃಷ್ಣಶರ್ಮ: ಫೆಲೋಶಿಪ್’ಗೆ ಅರ್ಜಿ ಆಹ್ವಾನಿಸಲಾಗಿದೆ. ಕೃಷ್ಣಶರ್ಮ ಅವರ ಸಮಗ್ರ ಸಾಹಿತ್ಯವನ್ನು ಇಂದಿನ ದೃಷ್ಟಿಕೋನದಿಂದ ವಿಮರ್ಶೆಗೆ ಒಳಪಡಿಸಲು ಈ ಫೆಲೋಶಿಪ್ ಆರಂಭಿಸಲಾಗಿದೆ. ಇದು ₹25 ಸಾವಿರ ನಗದು ಹೊಂದಿದೆ. ಅಧ್ಯಯನ ಮತ್ತು ಪ್ರಬಂಧ ಸಲ್ಲಿಕೆಗೆ ಒಂದು ವರ್ಷ ಮಾತ್ರ ಕಾಲಾವಕಾಶ. 40 ವರ್ಷದೊಳಗಿನವರು, ಮೇ 15ರೊಳಗೆ ಅರ್ಜಿ ಸಲ್ಲಿಸಬೇಕು.

ಕಥೆ, ಕಾವ್ಯ ಸ್ಪರ್ಧೆ:

ಕೃಷ್ಣಶರ್ಮರ ಹೆಸರಿನಲ್ಲಿ ರಾಜ್ಯಮಟ್ಟದ ಕಾವ್ಯ ಸ್ಪರ್ಧೆ ಆಯೋಜಿಸಲಾಗಿದ್ದು, ಮೂವರಿಗೆ ತಲಾ ₹5,000, ₹3,000, ₹2,000 ನಗದು ಬಹುಮಾನವಿದೆ. ರಾಜ್ಯಮಟ್ಟದ ಕಥಾ ಸ್ಪರ್ಧೆ ಕೂಡ ಇದ್ದು, ಮೂವರಿಗೆ ತಲಾ ₹10 ಸಾವಿರ, ₹8,000 ಮತ್ತು ₹5,000 ನಗದು ಬಹುಮಾನವಿದೆ. 35 ವರ್ಷದೊಳಗಿನವರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಸಂಪರ್ಕಕ್ಕೆ ದೂರವಾಣಿ ಸಂಖ್ಯೆ: 0831–2474649.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.