ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣ ಕೋಟ್ಯಧೀಶ, ಸಾಲವೂ ಇದೆ

Last Updated 26 ಮೇ 2022, 12:43 IST
ಅಕ್ಷರ ಗಾತ್ರ

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಸತತ 3ನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಹಾಲಿ ವಿಧಾನಪರಿಷತ್‌ ಸದಸ್ಯ ಅರುಣ ಶಹಾಪುರ ಕೋಟ್ಯಧೀಶ.

ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಆಸ್ತಿ ವಿವರ ನೀಡಿದ್ದಾರೆ. 48 ವರ್ಷ ವಯಸ್ಸಿನ ಅವರು, ವಿಜಯಪುರದ ನಿವಾಸಿ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. 2021–22ನೇ ಸಾಲಿನಲ್ಲಿ ಒಟ್ಟು ₹ 7.16 ಲಕ್ಷ ಆದಾಯ ತೋರಿಸಿದ್ದಾರೆ.

ಒಟ್ಟು ₹ 1.71 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ₹ 75 ಲಕ್ಷ ಚರಾಸ್ತಿ ಹೊಂದಿದ್ದಾರೆ.

ಪತ್ನಿ ಹೆಸರಿನಲ್ಲಿ ₹ 14.22 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ₹ 31.15 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪುತ್ರ ರೀತ್ ಹೆಸರಿನಲ್ಲಿ ₹ 1.78 ಲಕ್ಷ ಮತ್ತು ಪುತ್ರಿ ರಿಯಾ ಹೆಸರಿನಲ್ಲಿ ₹ 9.12 ಲಕ್ಷ ಚರಾಸ್ತಿ ಇದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಕೈಯಲ್ಲಿ ₹ 3 ಲಕ್ಷ ಹಣವಿದೆ. ಪತ್ನಿ ಬಳಿ ₹ 1 ಲಕ್ಷವಿದೆ. ತಮ್ಮ ಬಳಿ ₹ 4.08 ಲಕ್ಷ ಮೌಲ್ಯದ ಚಿನ್ನಾಭರಣ, ಪತ್ನಿ ಬಳಿ ₹ 16 ಲಕ್ಷ ಮೌಲ್ಯದ ಆಭರಣವಿದೆ. ಪುತ್ರನ ಬಳಿ ₹ 1.78 ಲಕ್ಷ ಮೌಲ್ಯದ ಹಾಗೂ ಪುತ್ರಿ ಹೆಸರಿನಲ್ಲಿ ₹ 3.57 ಲಕ್ಷ ಮೌಲ್ಯದ ಬಂಗಾರ ಮತ್ತು ₹ 1.05 ಲಕ್ಷ ಬೆಲೆಯ ಬೆಳ್ಳಿ ಆಭರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಅರುಣ ₹ 13.36 ಲಕ್ಷ ಮೌಲ್ಯದ ಕಾರು ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ₹ 50 ಲಕ್ಷ ಹಾಗೂ ಎಲ್‌ಐಸಿಯಲ್ಲಿ ₹ 7.56 ಲಕ್ಷ ಸಾಲ ಮಾಡಿದ್ದಾರೆ. ಪತ್ನಿ ಹೆಸರಿನಲ್ಲಿ ₹ 3 ಲಕ್ಷ ಸಾಲವಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT