ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಅಥಣಿ: ಕೃಷ್ಣಾ ನದಿ ನೀರಿನ ಪ್ರಮಾಣ ಏರಿಕೆ

ಅಥಣಿ: ಮುಂದವರಿದ ಪ್ರವಾಹ ಪರಿಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ಅಥಣಿ ತಾಲ್ಲೂಕಿನ 22 ಹಳ್ಳಿಗಳು ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.

ಸಪ್ತಸಾಗರ, ಹುಲಗಬಾಳಿ, ತಿರ್ಥ, ನದಿಇಂಗಳಗಾವ , ಅವರಖೋಡ ,ದೋಡವಾಡ, ಜನವಾಡ, ಸವದಿ, ಮಹೇಶವಾಡಗು ಹಳ್ಳಿಗಳು ಮುಳುಗಡೆ ಹಂತಕ್ಕೆ ಬಂದ್ದಿದು ಗ್ರಾಮಸ್ಥರು ಸಂಪೂರ್ಣವಾಗಿ ಗ್ರಾಮ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಶೇಡ್‌ ನಿರ್ಮಾಣಕ್ಕೆ ಹಿಂದೇಟು: ಮಹೇವಾಡಗಿ, ನಂದೇಶ್ವರ, ಜನವಾಡ ಗ್ರಾಮಸ್ಥರಿರುವ ಸ್ಥಳವಾದ ಝೀರೊ ಪಾಯಿಂಟ್ ಬಳಿ ಪ್ರವಾಹ ಪೀಡಿತರಿಗೆ ಉಳಿದುಕೊಳ್ಳಲು ಶೆಡ್ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ಹಿಂದೇಟು ಹಾಕುತ್ತಿದೆ.

‘ನಾಳೆ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಶೇಡ್‌ ನಿರ್ಮಾಣ ಮಾಡಿ ಏನು ಮಾಡುವುದಿದೆ, ಒಂದು ದಿನಕ್ಕೋಸ್ಕರ ಯಾಕೆ ಶೇಡ್‌ ನಿರ್ಮಾಣ ಮಾಡೋಣ‘ ಎನ್ನುತ್ತಿದ್ದಾರೆ. ಕಳೆದ ಬಾರಿ ಪ್ರವಾಹ ಬಂದಾಗ ಇದೇ ಸ್ಥಳಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಶೆಡ್ ನಿರ್ಮಾಣ ಮಾಡಿ ಪ್ರವಾಹ ಪೀಡಿತ ಮೂರು ಗ್ರಾಮಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು.

ಶಾಸಕರ ಭೇಟಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಮಹೇಶ ಕುಮಠಳ್ಳಿ ಹಾಗೂ ಚಿಕ್ಕೋಡಿ ಎಸಿ ಭೇಟಿ ನೀಡಿದರು. ಈ ವೇಳೆ ತಾಲ್ಲೂಕು ಆಡಳಿತಕ್ಕೆ ಶೀಘ್ರವಾಗಿ ಶೆಡ್‌ಗಳನ್ನು ನಿರ್ಮಾಣ  ಮಾಡಬೇಕು. ಆಸ್ಪತ್ರೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲೂ ಸೂಚಿಸದರು.

ಖಾಸಗಿ ವೈದರಿಂದ ಸಹಾಯ: ಪ್ರವಾಹ ಪರಿಸ್ಥಿತಿ ಎದುರಿಸಿ ಬಂದ ಸಾರ್ವಜನಿಕರಿಗೆ ಕೆಲವು ಚಿಕ್ಕ ಪುಟ್ಟ ಗಾಯಗಳಾಗಿದ್ದವು, ಗಂಜಿ ಕೇಂದ್ರದಲ್ಲಿ ವೈದ್ಯರು ಇಲ್ಲದ ಕಾರಣ ಖಾಸಗಿ ವೈದ್ಯರಾದ ಶ್ರೀಶೈಲ ಚೌಗಲಾ ಉಚಿತ ಚಿಕಿತ್ಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.