ಬುಧವಾರ, ಆಗಸ್ಟ್ 4, 2021
20 °C

ಅಥಣಿ | ಹಸಿರೀಕರಣ ಯೋಜನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಒಂದು ಗಿಡ ನೆಟ್ಟು ಬೆಳೆಸಿದರೆ ಒಂದು ಜೀವ ಉಳಿಸಿದಂತೆ. ಕಡಿದರೆ ಹಲವು ಜೀವಗಳನ್ನು ನಾಶಪಡಿಸಿದಂತೆ ಆಗುತ್ತದೆ. ಹೀಗಾಗಿ,  ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಗರ ಹಸಿರೀಕರಣ ಯೋಜನೆ– ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಊರಿಗೊಂದು ವನ–ಮನೆಗೊಂದು ಗಿಡ ಇದ್ದರೆ ಉಲ್ಲಾಸದ ವಾತಾವರಣ ಇರುತ್ತದೆ. ನಮ್ಮ ಪೂರ್ವಿಕರು ಪ್ರಕೃತಿ ಆರಾಧಕರಾಗಿದ್ದರು. ಆ ಪ್ರೀತಿಯನ್ನು ನಾವೂ ತೋರಬೇಕು’ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಕೆ. ಚಂದ್ರಶೇಖರ ಮಾತನಾಡಿದರು. ಎಪಿಎಂಸಿ ಆವರಣದಲ್ಲಿ 675, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 63, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 118, ಅಗ್ನಿಶಾಮಕ ದಳದ ಕಚೇರಿ ಆವರಣದಲ್ಲಿ 45 ಬೇವು, ಆಲ, ಅರಳಿ, ಬಸರಿ, ಬಸವನಪಾದ, ಹುಣಸೆ ಮೊದಲಾದ ಸಸಿಗಳನ್ನು ನೆಡಲಾಯಿತು.
 
ಸಹಾಯಕ ಅರಣ್ಯಾಧಿಕಾರಿ ಶಿವಾನಂದ ನಾಯಿಕವಾಡಿ, ವಲಯ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ, ತಹಶೀಲ್ದಾರ್‌ ದುಂಡಪ್ಪ ಕೊಮಾರ, ಗ್ರೇಡ್‌–2 ತಹಶೀಲ್ದಾರ್‌ ರಾಜಕುಮಾರ ಬುರ್ಲಿ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಸ್. ಯಾದವಾಡ, ಡಿಎಸ್ಪಿ ಎಸ್.ವಿ. ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು