ಉಗರಗೋಳ (ಸವದತ್ತಿ ತಾ.): ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿರುವ ಕೊಳ್ಳಗಳು ಹಾಗೂ ಕಿರು ಜಲಪಾತಗಳು ಮೈದುಂಬಿ ಹರಿಯುತ್ತಿವೆ.
ಬಂಡೆಗಳ ಮೇಲಿಂದ ಹರಿದು ಬರುವ ಜಲರಾಶಿಯ ನೋಟ ಮನ ಸೆಳೆಯುತ್ತಿದೆ. ಸವದತ್ತಿಯಿಂದ ಯಲ್ಲಮ್ಮನಗುಡ್ಡ ಮಾರ್ಗವಾಗಿ ಸಂಚರಿಸುವವರು ಮೊಬೈಲ್ ಫೋನ್ ಕ್ಯಾಮೆರಾ ಅಥವಾ ಕ್ಯಾಮೆರಾಗಳಲ್ಲಿ ಫೋಟೊ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.
ಉಗರಗೋಳ, ಚಿಕ್ಕುಂಬಿ, ಚುಳಕಿ, ಹಿರೇಕುಂಬಿ ಗ್ರಾಮದಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ವಾತಾವರಣ ತಂಪಾಗಿದೆ. ಗುರುವಾರ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.