ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ: 20 ಮಂದಿ ಆಯ್ಕೆ
ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ನೀಡಲಾಗುವ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ 20 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ತಲಾ 7, ಪ್ರೌಢಶಾಲಾ ವಿಭಾಗದಲ್ಲಿ 6 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.5ರಂದು ಬೆಳಿಗ್ಗೆ 10.30ಕ್ಕೆ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಡಿಡಿಪಿಐ ಡಾ.ಆನಂದ ಪುಂಡಲೀಕ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ: ಬೆಳಗಾವಿ ತಾಲ್ಲೂಕಿನ ಕುಮರಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ವಿ.ಶೋಭಾ, ಬಸವನಕುಡಚಿಯ ದೇವರಾಜ ಅರಸು ಕಾಲೊನಿಯ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವೀಣಾ ಕುಲಕರ್ಣಿ, ರಾಮದುರ್ಗ ತಾಲ್ಲೂಕು ಕಟಕೋಳದ ಅಂಬೇಡ್ಕರ್ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಕಮಲಾ ಸ್ವರಮಂಡಲ, ಖಾನಾಪುರ ತಾಲ್ಲೂಕಿನ ಢೋಕೆಗಾಳಿಯ ಸರ್ಕಾರಿ ಮರಾಠಿ ಕಿರಿಯ ಪ್ರಾಥಮಿಕ ಶಾಲೆಯ ನಾರಾಯಣ ಕರಂಬಳಕರ, ಸವದತ್ತಿ ತಾಲ್ಲೂಕಿನ ಬೆಟಸೂರಿನ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ರಮೇಶ ಚಿಕ್ಕುಂಬಿ, ಚನ್ನಮ್ಮ ಕಿತ್ತೂರು ತಾಲ್ಲೂಕಿನ ತುರಮರಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಬಿ.ಜೆ. ದಬಾಡಿ, ಬೈಲಹೊಂಗಲ ತಾಲ್ಲೂಕು ಹಣ್ಣಿಕೇರಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮಂಜುನಾಥ ಮಡಿವಾಳರ.
ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಬೆಳಗಾವಿ ತಾಲ್ಲೂಕಿನ ಸೋನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಕಾಶ ಹುಲಮನಿ, ಶಹಾಪುರದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 25ರ ಎಸ್.ಪಿ. ಮೋಡಕ, ಖಾನಾಪುರ ತಾಲ್ಲೂಕು ಗಣೇಬೈಲದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಸದಾನಂದ ಪಾಟೀಲ, ರಾಮದುರ್ಗ ತಾಲ್ಲೂಕು ಕರಡಿಗುಡ್ಡದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎ.ಎಚ್. ಶಿರಗುಂಪಿ, ಸವದತ್ತಿ ತಾಲ್ಲೂಕು ಕಗದಾಳದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎಲ್. ತಿಪ್ಪಾನಾಯ್ಕ, ಬೈಲಹೊಂಗಲ ತಾಲ್ಲೂಕಿನ ಮದನಭಾವಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಂಜುಳಾ ಶೆಟ್ಟರ್ ಹಾಗೂ ಚನ್ನಮ್ಮ ಕಿತ್ತೂರು ತಾಲ್ಲೂಕಿನ ಜಮಳೂರಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ರವಿ ಬುಲಬುಲೆ.
ಪ್ರೌಢಶಾಲೆ ವಿಭಾಗ: ಚನ್ನಮ್ಮ ಕಿತ್ತೂರು ತಾಲ್ಲೂಕಿನ ತುರಕರಶೀಗಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಎಂ.ಕೆ. ಸೂಡಿ, ಸವದತ್ತಿ ತಾಲ್ಲೂಕಿನ ಚಿಕ್ಕುಂಬಿಯ ಸರ್ಕಾರಿ ಪ್ರೌಢಶಾಲೆಯ ಎಸ್.ಎಸ್. ವಾಗೇರಿ, ರಾಮದುರ್ಗದ ಸರ್ಕಾರಿ ಪ್ರೌಢಶಾಲೆಯ ಉಮಾ ಕಡಕೋಳ, ಬೆಳಗಾವಿ ತಾಲ್ಲೂಕು ಅಗಸಗಿಯ ಎಲ್‍ವಿಕೆ ಪ್ರೌಢಶಾಲೆಯ ರಾಜಾರಾಮ ಮಧಾಳೆ, ಬೆಳಗಾವಿಯ ಮಹಾಂತೇಶ ನಗರದ ಸರ್ಕಾರಿ ಪ್ರೌಢಶಾಲೆಯ ಸದಾನಂದ ಬಡ್ಡೂರ, ಖಾನಾಪುರ ತಾಲ್ಲೂಕು ಮುಗಳಿಹಾಳದ ಕರ್ನಾಟಕ ಪಬ್ಲಿಕ್ ಶಾಲೆಯ ಶ್ರೀಕಾಂತ ವಡವಡಗಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.