‘ಮಕ್ಕಳಿಗೆ ಸಾಹಿತ್ಯಾಸಕ್ತಿ ಮೂಡಿಸಿ’
‘ಹಾಡು ಕವಿತೆ ಹೇಳಿಕೊಡುವ ಮೂಲಕ ಮಕ್ಕಳಿಗೆ ಸಾಹಿತ್ಯದ ಪರಿಚಯ ಹಾಗೂ ಆಸಕ್ತಿ ಮೂಡಿಸಬೇಕು. ಸಾಹಿತ್ಯಕ್ಕೆ ಧರ್ಮ ಜಾತಿ ಎಂಬ ತಾರತಮ್ಯವಿಲ್ಲ. ಕವಿ ಲೇಖಕರೆಲ್ಲರೂ ಒಂದೇ. ಇದೇ ಮನೋಭಾವದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಮಾಜ ಸದೃಢವಾಗಿರುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆರ್. ಠಕ್ಕಾಯಿ ಹೇಳಿದರು.