ಬೆಳಗಾವಿ: ‘ಬಸವಾದಿ ಶಿವಶರಣರ ಆಶಯದಂತೆ ಇಂದು ನಾಡಿನಲ್ಲಿ ಕಾಯಕ ಸಂಸ್ಕೃತಿ ಅಚ್ಚೊತ್ತಿದೆ. ಈಗ ಸ್ವಯಂಪ್ರೇರಿತ ದಾಸೋಹ ಸಂಸ್ಕೃತಿ ಬೆಳೆಸಬೇಕಾದ ಅನಿವಾರ್ಯತೆ ಇದೆ’ ಎಂದು ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಬಸವ ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ದಾಸೋಹ ಸಂಸ್ಕೃತಿ ಬೆಳೆಸಬೇಕಿದೆ. ಬಸವ ಭಕ್ತರು ಈ ಅಭಿಯಾನವನ್ನು ಅವಕಾಶವಾಗಿ ರೂಪಿಸಿಕೊಂಡು, ಬಸವ ರಥ, ನಾಟಕ ಪ್ರದರ್ಶನ, ಪ್ರಸಾದ ಮತ್ತಿತರ ವ್ಯವಸ್ಥೆಗೆ ದಾಸೋಹ ಸೇವೆ ಕಲ್ಪಿಸಬೇಕು’ ಎಂದರು.

ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ಲಿಂಗಾಯತ ಸಂಘಟನೆ ನಗರ ಘಟಕದ ಅಧ್ಯಕ್ಷ ಈರಣ್ಣ ದೇಯಣ್ಣವರ, ಬಿ.ಜಿ.ವಾಲಿಇಟಗಿ, ರಮೇಶ ಕಳಸಣ್ಣವರ, ಅಶೋಕ ಮಳಗಲಿ, ಎಸ್.ಎಂ.ದೊಡಮನಿ ಉಪಸ್ಥಿತರಿದ್ದರು. ಸಿ.ಎಂ.ಬೂದಿಹಾಳ ಸ್ವಾಗತಿಸಿದರು. ನಯನಾ ಗಿರಿಗೌಡರ ಪ್ರಾರ್ಥಿಸಿದರು. ಎ.ಕೆ.ಪಾಟೀಲ ವಂದಿಸಿದರು.

‘ಬಸವ ಸಂಸ್ಕೃತಿ ಅಭಿಯಾನ’

ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ‘ಲಿಂಗಾಯತ ಮಠಾಧೀಶರ ಒಕ್ಕೂಟದ ಮುಂದಾಳತ್ವ ಹಾಗೂ ನಾಡಿನ ಎಲ್ಲ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸೆ.11ರಂದು ಈ ಅಭಿಯಾನ ಬೆಳಗಾವಿಯಲ್ಲಿ ನಡೆಯಲಿದೆ. ಜಿಲ್ಲೆಯ ಬಸವ ಭಕ್ತರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.