ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಣಿ ಚಮಚಾಗಳು, ಸಹೋದರರಿಂದ ಸ್ವಾಮೀಜಿಗೆ ನೋವು: ವಿಜಯಾನಂದ

Last Updated 2 ಫೆಬ್ರುವರಿ 2022, 13:27 IST
ಅಕ್ಷರ ಗಾತ್ರ

ಬೆಳಗಾವಿ: ‘ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ನೀಡಿರುವ ದಾನದ ಬಗ್ಗೆ ಸಚಿವ ಮುರುಗೇಶ ನಿರಾಣಿ ಅವರ ಚಮಚಾಗಳು, ಸಹೋದರ ಲಕ್ಷ್ಮಣ ನಿರಾಣಿ ಮೊದಲಾದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಅದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ’ ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಇಲ್ಲಿ ನಡೆದ ಸಮಾಜದ ಕಾರ್ಯಕಾರಿಣಿ ನಂತರ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಸಂಘಟನೆಯಲ್ಲಿ ಇಲ್ಲದವರು, ಮೀಸಲಾತಿ ಹೋರಾಟದಲ್ಲಿ ಭಾಗವಹಿಸದವರು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮನಸ್ಸಿಗೆ ನೋವಾಗಿದೆ. ಹೀಗಾಗಿ, ನಿರಾಣಿ ಅವರು ನೀಡಿದ ಮಠಕ್ಕೆ ನೀಡಿದ ವಸ್ತುಗಳನ್ನು ಮರಳಿಸಲು ಒಮ್ಮತದಿಂದ ನಿರ್ಣಯಿಸಲಾಗಿದೆ’ ಎಂದರು.

‘ನಿರಾಣಿ ಸಹೋದರರು, ನಮ್ಮ ಪೀಠದ ಪರವಾಗಿ ಬರುವ ಸಮಾಜದವರಿಗೆ ಧಮ್ಕಿ ಹಾಕುವುದು, ಅವರ ಮನೆಗೆ ಹೋಗಿ ಹೊಡೆಯವುದು ಮತ್ತು ದೌರ್ಜನ್ಯ ಎಸಗುವುದು ಮಾಡುತ್ತಿದ್ದಾರೆ. ಈ ಬಗ್ಗೆ ಸಮಾಜದವರು ನನಗೆ ದೂರು ನೀಡಿದ್ದಾರೆ’ ಎಂದು ಆರೋಪಿಸಿದರು.

‘ಅವರು ರಸ್ತೆಯಲ್ಲಿ ನಿಂತಿದ್ದಾರೆಂದು ನಾವೂ ನಿಲ್ಲಲಾಗದು. ಅವರು ಚಿಲ್ಲರೆಗಳಾದರೆಂದು ನಾವೂ ಆಗಲಾಗುವುದಿಲ್ಲ. ತಪ್ಪು ಮಾಡಿದವರಿಗೆ ಗುರುಗಳು ಬುದ್ಧಿ ಹೇಳುತ್ತಾರೆ. ಆದಾಗ್ಯೂ ತಿದ್ದಿಕೊಳ್ಳದಿದ್ದಲ್ಲಿ ಸಮಾಜವೇ ಪಾಠ ಕಲಿಸುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಲೆಂದು ಪ್ರವರ್ಗ 2ಎ ಮೀಸಲಾತಿಗೆ ಹೋರಾಟ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT