ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿ ಗೆಲುವು ಸಾಧಿಸಿದ ಬಸವರಾಜ ಹೊರಟ್ಟಿ

ಇಲ್ಲಿಯವರೆಗೆ, ಮುಂದೆಯೂ ಶಿಕ್ಷಕರ ಋಣ ತೀರಿಸುತ್ತೇನೆ: ಬಸವರಾಜ ಹೊರಟ್ಟಿ
Last Updated 15 ಜೂನ್ 2022, 10:36 IST
ಅಕ್ಷರ ಗಾತ್ರ

ಬೆಳಗಾವಿ: 'ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರಿಗೆ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡುತ್ತೇನೆ' ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇಬಾರಿ ಗೆಲುವು ಸಾಧಿಸಿದ ಬಸವರಾಜ ಹೊರಟ್ಟಿ ಹೇಳಿದರು.

ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಶಿಕ್ಷಕರ ಬೇಡಿಕೆ ಈಡೇರಿಕೆಗೆ ನಾನು ಸದಾ ಬದ್ದ. ಸಭಾಪತಿ ಆಗಿದ್ದರಿಂದ ಹೋರಾಟ ನಡೆಸಲು ಆಗಿರಲಿಲ್ಲ. ಈಗ ಮತ್ತಷ್ಟು ಹೋರಾಟ ನಡೆಸಲಿದ್ದೇನೆ ಎಂದರು.

ಮುಂದೆ ಸಭಾಪತಿ ಅಥವಾ ಸಚಿವ ಸ್ಥಾನ ಪಕ್ಷಕ್ಕೆ ಬಿಟ್ಟ ವಿಷಯ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.

ಪಶ್ಚಿಮ ಶಿಕ್ಷಕರ ಮತದಾರರ ಕ್ಷೇತ್ರದ ಫಲಿತಾಂಶ ಪಶ್ಚಿಮ ಶಿಕ್ಷಕರ ಮತಕ್ಷೆತ್ರದಲ್ಲಿ ಮತಗಳ ಹಂಚಿಕೆ

ಬಸವರಾಜ ಹೊರಟ್ಟಿ (ಬಿಜೆಪಿ)– 9266

ಬಸವರಾಜ ಗುರಿಕಾರ (ಕಾಂಗ್ರೆಸ್)– 4597

ಶ್ರೀಶೈಲ ಗಡದಿನ್ನಿ (ಜೆಡಿಎಸ್)– 273

ಎಂ.ಪಿ.ಕರಿಬಸಪ್ಪ ಮಧ್ಯಾಹ್ನದ– 60

ಕೃಷ್ಣವೇಣಿ– 58

ಪ್ರೊ. ಎಫ್‌.ವಿ.ಕಲ್ಲಣ್ಣಗೌಡರ– 27

ಗೋವಿಂದಗೌಡರ ರಂಗನಗೌಡ– 79

ಒಟ್ಟು ಸಿಂಧು ಮತಗಳು– 14360

ಅಸಿಂಧು ಮತಗಳು– 1223

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT