ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಪಠ್ಯಕ್ರಮ ಬದಲಿಸದಿರಲು ಆಗ್ರಹ

Published 4 ಜುಲೈ 2024, 14:14 IST
Last Updated 4 ಜುಲೈ 2024, 14:14 IST
ಅಕ್ಷರ ಗಾತ್ರ

ಬೆಳಗಾವಿ: ‘ಕನ್ನಡ ಮಾಧ್ಯಮದ ಸಮಾಜ ವಿಜ್ಞಾನ ವಿಷಯದ 9ನೇ ತರಗತಿಯ ಪಠ್ಯದಲ್ಲಿ ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಶೀರ್ಷಿಕೆಯಡಿ ಅಳವಡಿಸಿದ ವಿಷಯ ಸೂಕ್ತವಾಗಿದೆ. ‘ವೀರಶೈವ’ ಎಂಬ ಪದವನ್ನು ಪಠ್ಯದಿಂದ ಕೈಬಿಟ್ಟು ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದ ಅವರು, ‘ವೀರಶೈವ ಶಿವಾಚಾರ್ಯ ಸಂಸ್ಥೆ ಹಾಗೂ ಕೆಲವು ರಾಜಕಾರಣಿಗಳು ವೀರಶೈವ ಪದ ಕೈಬಿಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದುವೇಳೆ ಸರ್ಕಾರ ಒತ್ತಡಕ್ಕೆ ಮಣಿದು ತನ್ನ ನಿಲುವು ಬದಲಿಸಿದರೆ, ಅದು ಇತಿಹಾಸ ಹಾಗೂ ಬಸವ ತತ್ವಗಳಿಗೆ ಮಾಡಿದ ವಿರೋಧವಾಗುತ್ತದೆ. ಹಾಗಾಗಿ ಯಾವ ಕಾರಣಕ್ಕೂ ಪಠ್ಯಕ್ರಮ ಬದಲಿಸಬಾರದು. ಸರ್ಕಾರ ಅಂಥ ನಿರ್ಧಾರ ಕೈಗೊಂಡರೆ ಉಗ್ರಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT