‘ರೋಗ ನಿವಾರಣೆ; ಜಾಗೃತಿ ಅವಶ್ಯ’
‘ರೋಗ ಬಂದ ನಂತರ ಚಿಕಿತ್ಸೆ ಪಡೆ್‌ಯುವುದಕ್ಕಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕು. ದೇಹಕ್ಕೆ ಅಂಟುವ ರೋಗದೊಂದಿಗೆ ಸಮಾಜಕ್ಕೆ ಅಂಟುವ ರೋಗದ ಲಕ್ಷಣಗಳನ್ನು ಗುರುತಿಸಿ ನಿವಾರಿಸಬೇಕು’ ಎಂದು ಮಧುಮೇಹ ತಜ್ಞ ಸಯ್ಯದಲಿ ಅಲಿಸಾಬನವರ ಹೇಳಿದರು. ಸಿಪಿಐ ವಿನಾಯಕ ಬಡಿಗೇರ ಮಾತನಾಡಿ ‘ಪೊಲೀಸ್ ಇಲಾಖೆಯಿಂದ ಗ್ರಾಮೀಣ ಪ್ರದೇಶದಲ್ಲಿ 50 ಜನರ ಸಮಿತಿ ರಚಿಸಿ ಸಭೆ ನಡೆಸಲಾಗುವುದು. ಅಲ್ಲಿನ ಸಮಸ್ಯೆ ಮತ್ತು ಪರಿಹಾರದ ಕುರಿತು ಚರ್ಚೆ ನಡೆಸಲಾಗುವುದು. ಎಲ್ಲರೂ ಸೌಹಾರ್ದದಿಂದ ಬದುಕಿ ಸುಂದರ ಸಮಾಜ ಕಟ್ಟಲು ಮುಂದಾಗಬೇಕು’ ಎಂದು ಕರೆ ನೀಡಿದರು.