ಮೂಡಲಗಿ: ‘ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘವು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ ₹4.15 ಕೋಟಿ ನಿವ್ವಳ ಲಾಭ ಪಡೆದು ಪ್ರಗತಿಯಲ್ಲಿ ಸಾಗಿದೆ’ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬ.ಬೆಳಕೂಡ ಹೇಳಿದರು.

ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಸಭಾಭವನದಲ್ಲಿ 34ನೇ ವರ್ಷದ ಸರ್ವಸಾಧಾರಣಾ ಸಭೆಯಲ್ಲಿ ಮಾತನಾಡಿದ ಅವರು, ‘ಸದ್ಯ ₹78.86 ಲಕ್ಷ ಷೇರು ಬಂಡವಾಳ, ₹78.84 ಕೋಟಿ ಠೇವು, ₹22.92 ಕೋಟಿ ನಿಧಿ, ₹8.75 ಕೋಟಿ ಗುಂತಾವಣಿಗೆಳು ಇದ್ದು, ದುಡಿಯುವ ಬಂಡವಾಳ ₹98.56 ಕೋಟಿ ಮತ್ತು ಅಡಿಟ್ದಲ್ಲಿ 'ಅ' ಶ್ರೇಣಿ ಪಡೆದುಕೊಂಡಿದೆ’ ಎಂದು ತಿಳಿಸಿದರು.

ಸಂಘವು ಕಳೆದ 25 ವರ್ಷಗಳಿಂದ ಶೇ 100ರಷ್ಟು ಸಾಲ ವಸೂಲಾತಿ ಮಾಡಿದ್ದು, ಸದಸ್ಯರಿಗೆ ಶೇ 25ರಷ್ಟು ಲಾಭಾಂಶ ವಿತರಿಸಿವುದರ ಜೊತೆಗೆ ಮರಣ ಹೊಂದುವ ಸದಸ್ಯರ ಕುಟುಂಬಕ್ಕೆ ₹5 ಸಾವಿರ ಮರಣೋತ್ತರ ನಿಧಿ ನೀಡಲಾಗುತ್ತಿದೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಧನ ನೀಡಲಾಗುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ಶಿವರುದ್ರ ಬಿ. ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೋರೊಶಿ, ಮಲ್ಲಪ್ಪ ಖಾನಾಪುರ, ರಾಮಪ್ಪಾ ದಬಾಡಿ, ಹಣಮಂತ ಪರಕನಟ್ಟಿ, ಸುಭಾಷ ಖಾನಾಪುರ, ಬಸಪ್ಪಾ ಹೆಬ್ಬಾಳ, ದುಂಡವ್ವಾ ಕಡಾಡಿ, ಲಕ್ಷ್ಮೀಬಾಯಿ ಕಂಕಣವಾಡಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.