ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ನದಿಗೆ ಬಿದ್ದ ಬೈಕ್: ಯುವಕ ನಾಪತ್ತೆ, ಇನ್ನೊಬ್ಬ ಪಾರು

Published : 3 ಆಗಸ್ಟ್ 2024, 21:09 IST
Last Updated : 3 ಆಗಸ್ಟ್ 2024, 21:09 IST
ಫಾಲೋ ಮಾಡಿ
Comments

ಬೆಳಗಾವಿ: ತಾಲ್ಲೂಕಿನ ಬಿ.ಕೆ. ಕಂಗ್ರಾಳಿಯಲ್ಲಿ ಶನಿವಾರ ರಾತ್ರಿ ಬೈಕೊಂದು ಮಾರ್ಕಂಡೇಯ ನದಿಗೆ ಬಿದ್ದು, ಒಬ್ವ ಸವಾರ ನೀರುಪಾಲಾಗಿದ್ದು, ಇನ್ನೊಬ್ಬ ಈಜಿ ದಡ ಸೇರಿದ್ದಾರೆ.

ತಾಲ್ಲೂಕಿನ ಅಳತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23) ನೀರಿನಲ್ಲಿ ಕೊಚ್ಚಿಕೊಂಡು‌ ಹೋದ ಯುವಕ. ಇವರ ಸಹೋದರ ಜ್ಯೋತಿನಾಥ ಪಾಟೀಲ ಈಜಿ ದಡ ಸೇರಿದ್ದಾರೆ.

ಇಬ್ಬರೂ ಸಹೋದರರು ಅಳತಗಾದಿಂದ ಕಂಗ್ರಾಳಿಗೆ ಕ್ಷೌರ ಮಾಡಿಸಿಕೊಳ್ಳಲು ಹೊರಟಿದ್ದರು. ನದಿ ಹರಿಯುವ ಜಾಗದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತಯೇ ಸ್ಥಳಕ್ಕಾಗಮಿಸಿದ ಕಾಕತಿ ಠಾಣೆ ಪೊಲೀಸರು ಓಂಕಾರ ಪಾಟೀಲಗಾಗಿ ಶೋಧ ಕಾರ್ಯ ಶುರು ಮಾಡಿದರು. ಡಿಸಿಪಿ ಪಿ.ವಿ.ಸ್ನೇಹಾ ಅವರು ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ಎನ್.ಡಿ.ಆರ್.ಎಫ್ ತಂಡ ಕೂಡ ಕರಿಸಲಾಗಿದ್ದು ಶೋಧ ಕಾರ್ಯ ರಾತ್ರಿಯೂ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT