ಬೆಳಗಾವಿ: ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ–ದೆಹಲಿ ನೇರ ವಿಮಾನಯಾನ ಆರಂಭಕ್ಕೆ ಮುಹೂರ್ತ ಕೂಡಿ ಬಂದಿದೆ.

ಸ್ಪೈಸ್ ಜೆಟ್ ವಿಮಾನವು ಬೆಳಗಾವಿ–ದೆಹಲಿ–ಲೇಹ್ ಮಧ್ಯೆ ಆ.13ರಿಂದ ಹಾರಾಟ ನಡೆಸಲಿದೆ. 149 ಸೀಟುಗಳ ವಿಮಾನ ಆರಂಭದಲ್ಲಿ ವಾರದಲ್ಲಿ 2 ದಿನ ಅಂದರೆ ಸೋಮವಾರ ಮತ್ತು ಶುಕ್ರವಾರ ಕಾರ್ಯಾಚರಿಸಲಿದೆ. ಸಂಜೆ 4.35ಕ್ಕೆ ಸಾಂಬ್ರಾಕ್ಕೆ ಬಂದು ಸಂಜೆ 5.05ಕ್ಕೆ ದೆಹಲಿಗೆ ತೆರಳುತ್ತದೆ.

‘ದಹಲಿ-ಬೆಳಗಾವಿ ನಡುವೆ ವಿಮಾನಯಾನ ಸೇವೆ ಪ್ರಾರಂಭ ಆಗಬೇಕು ಎನ್ನುವುದು ಇಲ್ಲಿನ ಜನರ ಬಯಕೆಯಾಗಿತ್ತು. ಅದರಂತೆ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರು ಆಗಿನ ವಿಮಾನಯಾನ ಸಚಿವ ಹರದೀಪ್ಸಿಂಗ್ ಪುರಿ ಅವರನ್ನು ಒತ್ತಾಯಿಸಿದ್ದರು. ಆ ಕನಸು ಈಗ ನನಸಾಗಿದೆ. ಇದರೊಂದಿಗೆ ಈ ನಿಲ್ದಾಣವು ಸಧ್ಯ 12 ದೊಡ್ಡ ನಗರಗಳೊಂದಿಗೆ ನೇರ ವಿಮಾನಯಾನ ಸಂಪರ್ಕ ಹೊಂದಿದಂತಾಗಿದೆ’ ಎಂದು ಸಂಸದೆ ಮಂಗಲಾ ಸುರೇಶ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.