ಬೆಳಗಾವಿ: ಜಿಲ್ಲಾ ಪಂಚಾಯಿತಿ ವತಿಯಿಂದ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಜನೋಪಯೋಗಿ ಕೆಲಸಗಳು ಹಾಗೂ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕೈಗೊಂಡ ಕ್ರಮಗಳ ಕುರಿತು ‘ಪ್ರಜಾವಾಣಿ’ ಸಿದ್ಧಪಡಿಸಿದ ವಾರ್ಷಿಕ ಕ್ಯಾಲೆಂಡರ್ಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕ ಆಸಿಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹಾಗೂ ಇತರ ಅಧಿಕಾರಿಗಳು ಕ್ಯಾಲೆಂಡರ್ಗಳನ್ನು ಬಿಡುಗಡೆ ಮಾಡಿದರು.

ವಿಶೇಷ ವಿನ್ಯಾಸ, ಪರಿಪೂರ್ಣ ಮಾಹಿತಿ, ವರ್ಣರಂಜಿತ ಪುಟಗಳನ್ನು ಕಂಡು ಗಣ್ಯರು ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿಯಿಂದ ಕೈಗೊಂಡ ಮನರೇಗಾ ಅಡಿ ಶಾಲೆಗಳ ಕಾಮಗಾರಿ, ಕಸದ ತೊಟ್ಟಿ ನಿರ್ಮಾಣ, ಮೈದಾನ ಅಭಿವೃದ್ಧಿ, ಮೃಗಾಲಯದಲ್ಲಿ ಅಕ್ಕ ಕೆಫೆ, ಸುವರ್ಣ ಸೌಧದ ಮುಂದೆ ವಿಜ್ಞಾನ ವನ ನಿರ್ಮಾಣ, ವಿದ್ಯಾರ್ಥಿಗಳಿಗಾಗಿ ಸಿಇಟಿ ಸಕ್ಷಮ್, ಮಹಿಳಾ ಸಬಲೀಕರಣ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಅವಸರ್ ಮಳಿಗೆಗಳು, ಎನ್ಆರ್ಎಲ್ಎಂ, ಬಾಕ್ಸ್ ಕ್ರಿಕೆಟ್ ಮೈದಾನ ನಿರ್ಮಾಣ, ಸ್ವಚ್ಛ ಭಾರತ್ ಮಿಷನ್, ಸಂಜೀವಿನ ಎಂಬ ಶಾವಿಗೆ ಬ್ರ್ಯಾಂಡ್ ಅಭಿವೃದ್ಧಿ... ಹೀಗೆ ವೈವಿಧ್ಯಮಯ ಸಾಧನೆಗಳ ನೋಟ ಈ ಕ್ಯಾಲೆಂಡರುಗಳಲ್ಲಿದೆ.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ್, ಮಹಿಳಾ ಅಭಿವೃದ್ಧಿ ಅಧಿಕಾರಿ ಕಾಂಚನ ಅಮಟೆ, ಸಿಡಿಪಿಒಗಳಾದ ರಾಮಮೂರ್ತಿ ಕೆ.ವಿ, ಸುಮಿತ್ರಾ, ಆನಂದ ಅಕಾಡೆಮಿಯ ಆನಂದ ಕರಡಿ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.