ಗೋಕಾಕ: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಎಂದು ಘೋಷಿಸುವಂತೆ ಬರುವ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರಲ್ಲಿ ನಿಯೋಗದ ಮೂಲಕ ಭೇಟಿ ಮಾಡಿ ನೂತನ ಗೋಕಾಕ ಜಿಲ್ಲಾ ಕೇಂದ್ರ ರಚಿಸುವಂತೆ ಒತ್ತಾಯಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.ಜೆ.ಎಚ್.ಪಟೇಲ್ ಅವರ ಸರ್ಕಾರ ಗೋಕಾಕ ನೂತನ ಜಿಲ್ಲಾ ಕೇಂದ್ರ ಎಂದು ಘೋಷಿಸಿ ಕಾರಣಾಂತರಗಳಿಂದ ಹಿಂದೆ ಪಡೆದಿತ್ತು. ಅಂದಿನಿಂದ ಇಂದಿನವರೆಗೂ ಗೋಕಾಕ ಜಿಲ್ಲೆಗಾಗಿ ನಿರಂತರ ಹೋರಾಟಗಳು ನಡೆಯುತ್ತಾ ಬಂದಿದ್ದು, ಸರ್ಕಾರದ ನಿರ್ಣಯಗಳು ರಾಜಕೀಯ ವ್ಯವಸ್ಥೆಯ ಪೂರಕ ನಿರ್ಣಯಗಳಾಗಿ ಬಿಟ್ಟಿವೆ. ಹಾಗಾಗಿ ಬೆಳೆಗಾವಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವರು ಇದಕ್ಕೆ ವೇಗ ಒದಗಿಸಿ ಜಿಲ್ಲೆ ವಿಭಜನೆ ಮಾಡುವ ಕಾರ್ಯ ಮಾಡಬೇಕು ಎಂದರು.

ಜನಗಣತಿ ಆದೇಶದಲ್ಲಿ ಜಿಲ್ಲೆ ತಾಲ್ಲೂಕು ಗ್ರಾಮಗಳ, ಹೋಬಳಿ ಸಂಬಂಧಿಸಿದಂತೆ ಇದೇ ಡಿಸೆಂಬರ್ ತಿಂಗಳ ಒಳಗಾಗಿ ತಾವು ವಿಗಂಡಣೆಯ ಪ್ರಕ್ರಿಯೆ ಪೂರೈಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಾಗಾಗಿ ಸರ್ಕಾರ ಆದಷ್ಟು ಬೇಗ ಡಿಸೆಂಬರ್ ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜನೆಯ ಪೂರಕವಾದ ನಿರ್ಣಯ ತಗೆದುಕೊಂಡು ಗೋಕಾಕ ನೂತನ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ಬೆಳಗಾವಿ ಜಿಲ್ಲೆ ವಿಭಜನೆಗೆ ಮಿನಮೇಷ ಏಕೆ ? ಎಂದು ಪ್ರಶ್ನಿಸಿದರು.

ಕಳೆದ ನಾಲ್ಕು ದಶಕಗಳಿಂದ ಇಲ್ಲಿನ ಜನರು ಶಾಂತಿಯುತವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಸರ್ಕಾರ ಸ್ಪಂದಿಸಿಲ್ಲ. ಸಿದ್ದರಾಮಯ್ಯ ಅವರು ಗಟ್ಟಿ ಮುಖ್ಯಮಂತ್ರಿ ಇದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಹ ಹೋರಾಟದಿಂದ ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಂಡವರು ಹಾಗಾಗಿ ಈ ಇಬ್ಬರು ಗಟ್ಟಿಯಾಗಿ ನಿಂತರೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ನೂತನ ಜಿಲ್ಲಾ ಕೇಂದ್ರವಾಗುವುದರಲ್ಲಿ ಎರೆಡು ಮಾತ್ತಿಲ್ಲ ಎಂದರು.

ವಿಶ್ರಾಂತ ಪ್ರಾಚಾರ್ಯ ಪ್ರೊ. ಅರ್ಜುನ್ ಪಂಗಣ್ಣವರ ಮಾತನಾಡಿ, ಮೂರು ದಶಕಗಳಿಂದ ರಾಜಕೀಯದಲ್ಲಿರುವ ರಾಜಕಾರಣಿಗಳು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸೇರಿಸಕೊಳ್ಳಬೇಕು. ಇಲ್ಲದಿದ್ದರೆ ಇತಿಹಾಸವೇ ಅವರನ್ನು ಪ್ರಶ್ನಿಸುವ ಕಾಲ ಬಂದಾಗ ಅವರಲ್ಲಿ ಉತ್ತರ ಇರುವುದಿಲ್ಲ. ಹಾಗಾಗಿ ಆದಷ್ಟು ಬೇಗ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಗೋಕಾಕ ನೂತನ ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ದಸ್ತಗೀರ ಪೈಲವಾನ್, ಪುಟ್ಟು ಖಾನಾಪೂರೆ, ಡಾ. ಪ್ರವಿಣ ನಾಯಿಕ, ಮಲ್ಲಪ್ಪ ಜಿಟ್ಟೆನ್ನರವ, ಸಂಜೀವ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.