ಬೆಳಗಾವಿ: ತಾಲ್ಲೂಕಿನ ನಿಲಜಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಗಾಂಜಾ ಸೇವಿಸುವ ವಿಚಾರಕ್ಕೆ ಇಬ್ಬರು ಸಹೋದರರ ನಡುವೆ ನಡೆದ ಗಲಾಟೆಯಲ್ಲಿ ಒಬ್ಬ ಸಾವಿಗೀಡಾಗಿದ್ದು, ಇನ್ನೊಬ್ಬ ತೀವ್ರ ಗಾಯಗೊಂಡಿದ್ದಾನೆ.

ನಿಲಜಿ ನಿವಾಸಿ ಸುಶಾಂತ ಸುಭಾಷ ಪಾಟೀಲ (20) ಮೃತ ಯುವಕ. ಇವರ ಅಣ್ಣ ಓಂಕಾರ ಸುಭಾಷ ಪಾಟೀಲ (23) ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಗಾಂಜಾ ಸೇವಿಸುವ ವಿಚಾರವಾಗಿ ಶುಕ್ರವಾರ ತಡರಾತ್ರಿ ಇಬ್ಬರ ನಡುವೆಯೂ ಜಗಳ ಶುರುವಾಗಿತ್ತು. ನೂಕಾಟ– ತಳ್ಳಾಟದಲ್ಲಿ ಮನೆಯ ಎರಡನೇ ಮಹಡಿಯಿಂದ ಇಬ್ಬರೂ ಕೆಳಕ್ಕೆ ಬಿದ್ದಿದ್ದರು. ಸುಶಾಂತ ಸ್ಥಳದಲ್ಲೇ ಮೃತಪಟ್ಟರು. ಓಂಕಾರ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾರಿಹಾಳ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಗಾಂಜಾ ಸೇವಿಸುವ ಚಟ ಇಬ್ಬರನ್ನೂ ಅಂಟಿಕೊಂಡಿತ್ತು. ಇಬ್ಬರಿಗೂ ಪಾಲಕರು ತಿಳಿ ಹೇಳಿ ಮನೆ ಕೆಲಸ ನೋಡಿಕೊಳ್ಳುವಂತೆ ಸೂಚಿಸಿದ್ದರು. ತಡರಾತ್ರಿ ಜಗಳ ಶುರು ಮಾಡಿಕೊಂಡ ಇಬ್ಬರೂ ಆಯತಪ್ಪಿ ಕೆಳೆಗೆ ಬಿದ್ದಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.