ಬೆಳಗಾವಿ: ‘ಸಮಾಜ ನಿರ್ಮಾಣದಲ್ಲಿ ಎಲ್ಲ ವರ್ಗಗಳು ಜನರಷ್ಟೇ; ಸ್ವಚ್ಛತಾ ಕಾರ್ಮಿಕರ ಪಾತ್ರವೂ ಅತ್ಯಂತ ಮಹತ್ವದ್ದು’ ಎಂದು ಮೇಯರ್ ಮಂಗೇಶ ಪವಾರ್ ಹೇಳಿದರು.

ವೇದಾಂತ ಫೌಂಡೇಶನ್ ಶನಿವಾರ ಆಯೋಜಿಸಿದ್ದ ಶಿಕ್ಷಕರು, ಪತ್ರಕರ್ತರು, ಪೊಲೀಸರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ‘ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಾರೆ. ಪತ್ರಕರ್ತರು ಸಮಾಜದ ಕಣ್ಣಾಗಿದ್ದಾರೆ. ಪೊಲೀಸರು ಶಾಂತಿ, ಕಾನೂನು ಕಾಪಾಡುತ್ತಾರೆ. ಆದರೆ ಈ ಎಲ್ಲರ ಜೊತೆಗೆ ನಗರವನ್ನು ಸ್ವಚ್ಛವಾಗಿ ಇಡುವ ಸ್ವಚ್ಛತಾ ಕಾರ್ಮಿಕರು ಕೂಡ ಸಮಾಜದ ನಿಜವಾದ ಹೀರೋಗಳು’ ಎಂದರು.

ಉಪಮೇಯರ್ ವಾಣಿ ಜೋಶಿ ಮಾತನಾಡಿ, ‘ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.

‘ಫಾಸ್ಟ್ ಫುಡ್ ಸಂಸ್ಕೃತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಜನರು ಆರೋಗ್ಯದ ಬಗ್ಗೆ ಎಚ್ಚರವಾಗಿರಬೇಕು’ ಎಂದರು.

ಡಿಸಿಪಿ ನಿರಂಜನರಾಜೆ ಅರಸ್, ಉದ್ಯಮಿ ಆರ್.ವೈ. ಪಾಟೀಲ, ಅಶೋಕ್ ನಾಯಕ್, ಸಂತೋಷ್ ಜೈನೋಜಿ, ಲಿಂಗರಾಜ್ ಜಗಜಂಪಿ, ವೀರೇಶ್ ಕಿವಡಸಣ್ಣವರ ಮತ್ತಿತರರು ಮಾತನಾಡಿದರು.

ಅಧ್ಯಕ್ಷ ಆರ್.ಎಂ. ಚೌಗಲೆ ಅವರು, ಉತ್ತಮ ಶಿಕ್ಷಕರು, ಪ್ರಾಮಾಣಿಕ ಪತ್ರಕರ್ತರು ಮತ್ತು ನಿಷ್ಠಾವಂತ ಪೊಲೀಸರು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುತ್ತಾರೆ ಎಂದರು.

ಹಿರಿಯ ಪತ್ರಕರ್ತರಾದ ವಿಲಾಸ್ ಜೋಶಿ, ಜಿತೇಂದ್ರ ಶಿಂದೆ, ಬಿ.ಬಿ. ದೇಸಾಯಿ, ಶಿಕ್ಷಕ ಶೇಖರ್ ಕರಂಬೇಲ್ಕರ್, ಯುವರಾಜ ರತ್ನಾಕರ್, ಕಲ್ಲಪ್ಪ ಪಾಟೀಲ, ಉಮೇಶ ಬಾಲೇಕುಂದ್ರಿ, ಪೊಲೀಸ್ ಕಾನ್ಸ್ಟೆಬಲ್ ಮಹೇಶ್ ಪಾಟೀಲ, ಹೆಡ್ ಕಾನ್ಸ್ಟೆಬಲ್ ಶ್ರೀಕಾಂತ್ ಉಪ್ಪಾರ್ ಅವರನ್ನು ಸನ್ಮಾನಿಸಲಾಯಿತು.

ಸಿ.ಎ. ಜೀವನ ಶಹಾಪುರಕರ, ಧನಶ್ರೀ ಸೊಸೈಟಿ ಅಧ್ಯಕ್ಷ ನಿತಿನ್ ಯೇತೋಜಿ, ವಿ.ಕೆ. ಶೃಂಗೇರಿ, ಫೌಂಡೇಶನ್ ಅಧ್ಯಕ್ಷೆ ಜಯಶ್ರೀ ಪಾಟೀಲ, ಸಂಸ್ಥಾಪಕ ಸತೀಶ್ ಪಾಟೀಲ, ಉಪಾಧ್ಯಕ್ಷ ಕಲ್ಲಪ್ಪ ಕಡಮ್ ಇದ್ದರು. ಸಿ.ವೈ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎನ್.ಡಿ. ಮಾದಾರ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.