ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ನಿರಂತರವಾಗಿ ಜೊತೆಯಾಗಿದ್ದು, ಕೆಲಸ ಮಾಡೋಣ’ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬಾಳೇಕುಂದ್ರಿ ಬಿ.ಕೆ. ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನೂತನವಾಗಿ ನಿರ್ಮಿಸಿದ ಎನ್.ಆರ್.ಎಲ್.ಎಂ (ಸಂಜೀವಿನಿ ಶೆಡ್) ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಕ್ಷೇತ್ರವನ್ನು ರಾಜ್ಯದಲ್ಲೇ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಎನ್ನುವುದಕ್ಕೆ ನೀವೆಲ್ಲ ಸಾಕ್ಷಿಯಾಗಿದ್ದೀರಿ. ಇದೇ ವೇಗದಲ್ಲಿ ಕ್ಷೇತ್ರವನ್ನು ಮುಂದಕ್ಕೊಯ್ಯಲು ಎಲ್ಲರ ಬೆಂಬಲ ಅಗತ್ಯವಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಲಾಬಿ ಕೋಲಕಾರ, ಉಪಾಧ್ಯಕ್ಷರಾದ ಬೀಬಿಹನೀಫಾ ಜಮಾದಾರ, ಸದಸ್ಯರಾದ ಅಬೇದಾಬೇಗಂ ಸನದಿ, ಮೈನೂದ್ದಿನ್ ಅಗಸಿಮನಿ, ಭಾಗ್ಯಶ್ರೀ ಹಣಬರ, ವೀಣಾ ಪಾಟೀಲ, ಗುಡುಮಾಬಿ ಮೋಮಿನ್, ಮಲ್ಲಿಕ್ ಮನಿಯಾರ್, ಶಿವಲಿಂಗಯ್ಯ ಹಿರೇಮಠ, ಇಸ್ಮಾಯಿಲ್ ಮಕಾನದಾರ್, ಪಾರ್ವತಿ ತಳವಾರ, ಅಡಿವೆಪ್ಪ ಅಂಗಡಿ, ಗ್ರಾಮದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.