ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಮಹಾನಗರಪಾಲಿಕೆ: ಶೇ 33.87ರಷ್ಟು ಮತದಾನ

Last Updated 3 ಸೆಪ್ಟೆಂಬರ್ 2021, 11:15 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಮಧ್ಯಾಹ್ನ 3ರವರೆಗೆ ಶೇ 33.87ರಷ್ಟು ಮತದಾನವಾಗಿದೆ. ಸಂಜೆ 6ರವರೆಗೂ ಮತದಾನಕ್ಕೆ ಅವಕಾಶ‌ ಇದೆ.

ಈ ನಡುವೆ, ಮತದಾರರಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‘ಮಹಾನಗರಪಾಲಿಕೆ ಚುನಾವಣೆ ರಾಮತೀರ್ಥನಗರದ ವಾರ್ಡ್ ನಂ. 46ರಲ್ಲಿ ಮತದಾನ ಮಾಡಲು ಹೋದ ಮತದಾರರ‌ ದ್ವಿಚಕ್ರವಾಹನಗಳ ಚಕ್ರಗಳಲ್ಲಿನ ಗಾಳಿ‌ ತೆಗೆದು ಪೊಲೀಸರು ಹಿಂಸೆ ಕೊಡುತ್ತಿದ್ದಾರೆ. ಅಲ್ಲಿ ಪೂರ್ಣ ಬಯಲಿನ ರಸ್ತೆ ಇದೆ. ಯಾವ ಅಡಚಣಿಗಳಿಲ್ಲ. ಯಾವ ಸಂಚಾರಿ ನಿಯಮಗಳ ಫಲಕವಿಲ್ಲ. ಆದರೂ ಮತದಾನ ಹಾಕಿ ಬರುವಷ್ಟರಲ್ಲಿ ಚಕ್ರದ ಗಾಳಿ ತೆಗೆದಿದ್ದಾರೆ’ ಎಂದು ನಾಟಕಕಾರ ಡಿ.ಎಸ್. ಚೌಗಲೆ ದೂರಿದ್ದಾರೆ.

‘ಮತಗಟ್ಟೆಯ ನೂರು ಮೀಟರ್‌ಗಳಷ್ಟು ಅಂತರದಲ್ಲೂ ಸಂಚಾರಿ ನಿಷೇಧಗೊಳಿಸಿದ ಫಲಕಗಳಿಲ್ಲ. ಇದು ಪೋಲಿಸರ ದುಂಡಾವರ್ತನೆಯೆ ಸರಿ. ಇದನ್ನು ಖಂಡಿಸುವೆ. ಬೆಳಗಾವಿ ಪೋಲಿಸ್ ಆಯುಕ್ತಾಲಯದ ಹಿರಿಯ ಪೊಲೀಸ್ ಮೇಲಧಿಕಾರಿಗಳು ಇತ್ತ ಗಮನಹರಿಸಬೇಕು. ಪ್ರಜಾಪ್ರಭುತ್ವದಲ್ಲಿ ಮತ ಹಾಕುವ ಹಕ್ಕುದಾರನಿಗೆ ಹೀಗೆ ಹಿಂಸಿಸುವುದು ಸರಿಯಲ್ಲ. ತಕ್ಷಣ ಇಂತಹ ಕೃತ್ಯವನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT