ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಮಾರಾಟಕ್ಕೆ ಇಟ್ಟಿದ್ದ ಮಗು ಸಾವು

ಮಾರಾಟಕ್ಕೆ ಒಳಗಾಗುವುದನ್ನು ತಪ್ಪಿಸಿ, ರಕ್ಷಿಸಲಾಗಿದ್ದ ಹೆಣ್ಣು ಮಗು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಗುರುವಾರ (ಜೂನ್‌ 20) ಮೃತಪಟ್ಟಿದೆ.
Published 22 ಜೂನ್ 2024, 14:04 IST
Last Updated 22 ಜೂನ್ 2024, 14:04 IST
ಅಕ್ಷರ ಗಾತ್ರ

ಬೆಳಗಾವಿ: ಮಾರಾಟಕ್ಕೆ ಒಳಗಾಗುವುದನ್ನು ತಪ್ಪಿಸಿ, ರಕ್ಷಿಸಲಾಗಿದ್ದ ಹೆಣ್ಣು ಮಗು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಗುರುವಾರ (ಜೂನ್‌ 20) ಮೃತಪಟ್ಟಿದೆ.

‘ಮಗು ಎಂಟೇ ತಿಂಗಳಿಗೆ ಜನಿಸಿತ್ತು. ತೂಕ 1 ಕೆಜಿ 200 ಗ್ರಾಂ ಮಾತ್ರ ಇತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಮಗು ಜನ್ಮತಃ ಸೆಪ್ಟಿಸಿನಿಯಾ ಎಂಬ ಕಾಯಿಲೆಗೆ ಒಳಗಾಗಿತ್ತು. ನಾವು ಸಾಕಷ್ಟು ಪ್ರಯತ್ನ ಮಾಡಿದರೂ ಮಗು ಚೇತರಿಸಿಕೊಳ್ಳಲಿಲ್ಲ’ ಎಂದು ಜಿಲ್ಲಾಸ್ಪತ್ರೆಯ ಮಕ್ಕಳ ರೋಗತಜ್ಞ ಡಾ.ಶೈಲೇಶ್‌ ಪಾಟೀಲ ತಿಳಿಸಿದರು.

ಏನಿದು ಪ್ರಕರಣ: ‘ಪವಿತ್ರಾ ಮತ್ತು ಪ್ರವೀಣ ಎಂಬ ಪ್ರೇಮಿಗಳಿಗೆ ಮದುವೆಗೂ ಮುನ್ನವೇ ಮಗು ಜನಿಸಿತ್ತು. 30 ದಿನಗಳ ಬಳಿಕ ಮಗುವನ್ನು ಚಂದನ ಹಾಗೂ ಮಹಾದೇವಿ ಎನ್ನುವವರು ₹1.40 ಲಕ್ಷಕ್ಕೆ ಮಾರಾಟಕ್ಕೆ ಮುಂದಾಗಿದ್ದರು. ಈ ವಿಚಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಗೊತ್ತಾಗಿತ್ತು. ರಹಸ್ಯ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಮಗು ಖರೀದಿಸುವುದಾಗಿ ಕಳೆದ ಭಾನುವಾರ ಮಹಾದೇವಿ ಅವರನ್ನು ಬೆಳಗಾವಿಗೆ ಕರೆಯಿಸಿದರು. ಅವರಿಂದ ಮಗು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ರಕ್ಷಣಾ ಘಟಕದ ದೂರು ಆಧರಿಸಿ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳದ ಮಹಾದೇವಿ ಜೈನರ, ಚನ್ನಮ್ಮನ ಕಿತ್ತೂರಿನ ಅಬ್ದುಲ್‌ಗಫಾರ್‌ ಲಾಡಖಾನ್‌, ಬೈಲಹೊಂಗಲ ತಾಲ್ಲೂಕಿನ ತುರಕರ ಶೀಗಿಹಳ್ಳಿಯ ಚಂದನ ಸುಬೇದಾರ, ಬೈಲಹೊಂಗಲ ತಾಲ್ಲೂಕಿನ ಸಂಪಗಾವಿಯ ಪವಿತ್ರಾ ಮಡಿವಾಳರ, ಧಾರವಾಡ ತಾಲ್ಲೂಕಿನ ಹೊಸಟ್ಟಿಯ ಪ್ರವೀಣ ಮಡಿವಾಳರ ಬಂಧಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT