ಬೆಳಗಾವಿ: ‘ಹೊಸ ತಂತ್ರಜ್ಞಾನ ಬಳಸಿ ಮಾಡುತ್ತಿರುವ ನವಯುಗದ ಅಪರಾಧಗಳನ್ನು ಬೇಧಿಸುವುದು ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಲಭ್ಯವಿರುವ ಸಂಪನ್ಮೂಲಗಳ ಜತೆಗೆ, ಮಾನವಶಕ್ತಿ ಸಿದ್ಧಪಡಿಸುತ್ತಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಹೇಳಿದರು.

ಇಲ್ಲಿ ಬೆಳಗಾವಿ ಪತ್ರಕರ್ತರ ಸಂಘ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರ ಪೊಲೀಸ್ ವ್ಯವಸ್ಥೆ ಈಗ ಕಠಿಣವಾಗಿದೆ. ಸೈಬರ್ ಅಪರಾಧಗಳು, ನಕ್ಸಲರು ಮತ್ತು ಭಯೋತ್ಪಾದಕರ ಸ್ಲೀಪರ್ ಸೆಲ್ಗಳು ಹಾಗೂ ವಿದೇಶಿಯರ ಚಲನ–ವಲನಗಳ ಮೇಲೆ ನಿಗಾ ಇರಿಸಬೇಕಿದೆ’ ಎಂದರು.

‘ಪೊಲೀಸ್ ಕಾರ್ಯಪಡೆಯಲ್ಲಿ ಶೇ 83ರಿಂದ 85ರಷ್ಟು ಜನರು ಕಾನ್ಸ್ಟೆಬಲ್ಗಳಿಂದ ಸಹಾಯಕ ಉಪ ನಿರೀಕ್ಷಕರಿದ್ದಾರೆ. ಆಧುನಿಕ ಪೊಲೀಸ್ ವ್ಯವಸ್ಥೆಯಲ್ಲಿ ಪ್ರತಿ ಸಿಬ್ಬಂದಿಗೆ ಕಾನೂನಿನ ಜ್ಞಾನ, ಅಪರಾಧ ನಡೆದಾಗ ವಿಧಿವಿಜ್ಞಾನದ ಬಗ್ಗೆ ಅರಿವು ಇರಬೇಕಾಗುತ್ತದೆ. ಸೈಬರ್ ಅಪರಾಧಗಳಲ್ಲಿ ತಾಂತ್ರಿಕ ಜ್ಞಾನವೂ ಬೇಕಾಗುತ್ತದೆ. ಈ ಅಗತ್ಯತೆ ಪೂರೈಸಲು ಮತ್ತು ಪೊಲೀಸ್ ವ್ಯವಸ್ಥೆ ಇನ್ನಷ್ಟು ಜನಸ್ನೇಹಿಯಾಗಿಸಲು ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

ಮನೆ–ಮನೆಗೆ ಪೊಲೀಸ್: ‘ಈಗ ‘ಮನೆ–ಮನೆಗೆ ಪೋಲೀಸ್’ ಎಂಬ ಕಾರ್ಯಕ್ರಮ ಪರಿಚಯಿಸಿದ್ದು, 55 ಬೀಟ್ ರಚಿಸಿದ್ದೇವೆ. ಪ್ರತಿ ಬೀಟ್ನ ಪೊಲೀಸ್ ಕಾನ್ಸ್ಟೆಬಲ್ ತಮ್ಮ ಪ್ರದೇಶದ ಮನೆಗಳಿಗೆ ತೆರಳಿ, ಸಾರ್ವಜನಿಕರೊಂದಿಗೆ ಸಂವಹನ ನಡೆಸುತ್ತಾರೆ. ಅಪರಾಧಗಳ ತಡೆಗಟ್ಟುವಿಕೆಗೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮ, ಕಾನೂನಿನ ಬಗ್ಗೆ ಅರಿವು ಮೂಡಿಸುತ್ತಾರೆ. ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ತಿಳಿಸುತ್ತಾರೆ. ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ತಪ್ಪಿಸುವ ಕುರಿತಾಗಿಯೂ ಪಾಲಕರಿಗೆ ಶಿಕ್ಷಣ ನೀಡುತ್ತಾರೆ. ಇದರಿಂದ ಅಪರಾಧಗಳನ್ನು ತಗ್ಗಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಪೊಲೀಸರ ಮೇಲಿನ ಕೆಲಸದ ಹೊರೆ ಈಗ ಶೇ 70ರಿಂದ 80ರಷ್ಟು ಹೆಚ್ಚಾಗಿದೆ. ಹಬ್ಬಗಳು, ಪ್ರತಿಭಟನೆಗಳು, ಚುನಾವಣೆಗಳು, ಇತರೆ ಸಮಯಗಳಲ್ಲಿ ಬಂದೋಬಸ್ತ್ಗೆ ಅವರು ಸಿದ್ಧರಾಗಿರಬೇಕಿದೆ. ಇದರೊಂದಿಗೆ ವಿವಿಧ ಅಪರಾಧಗಳ ತನಿಖೆಗೆ ಆದ್ಯತೆ ನೀಡಲಾಗಿದೆ’ ಎಂದರು.

‘ಜನರು ಯಾವುದೇ ಪೊಲೀಸ್ ಠಾಣೆಯಲ್ಲಿ ತಮ್ಮ ದೂರು ದಾಖಲಿಸಬಹುದು. ಅಗತ್ಯವಿದ್ದಾಗ ಅದನ್ನು ಸಂಬಂಧಿತ ಠಾಣೆಗೆ ವರ್ಗಾಯಿಸಲಾಗುತ್ತದೆ. ಕೆಲವೊಮ್ಮೆ ತೊಡಕುಗಳಿದ್ದಾಗ ದೂರು ದಾಖಲಿಸಿಕೊಳ್ಳಲು ಠಾಣೆ ಅಧಿಕಾರಿಗಾಗಿ ಸಿಬ್ಬಂದಿ ಕಾಯುತ್ತಾರೆ’ ಎಂದು ಹೇಳಿದರು.

ಗಣೇಶೋತ್ಸವಕ್ಕೆ ಸಿದ್ಧತೆ: ‘ಗಣೇಶೋತ್ಸವ ಮತ್ತು ದಸರಾ ಹಬ್ಬಗಳ ಸಮಯದಲ್ಲಿ 24x7 ಮಾದರಿಯಲ್ಲಿ ಪೊಲೀಸ್ ವ್ಯವಸ್ಥೆ ಅಗತ್ಯವಿದೆ. ನಗರ ಪೊಲೀಸ್ ಕಮಿಷನರೇಟ್ನೊಂದಿಗೆ ಬೇರೆ ಕಡೆಯಿಂದ ಹೆಚ್ಚುವರಿ ಸಿಬ್ಬಂದಿ ಭದ್ರತೆಗೆ ಬರಲಿದ್ದಾರೆ. ಗಣೇಶೋತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಪೊಲೀಸರಿಗೆ ವಿಶ್ರಾಂತಿ ಸಿಗುವಂತೆಯೂ ನೋಡಿಕೊಳ್ಳಲಾಗುವುದು’ ಎಂದರು.

ಬೆಳಗಾವಿ ಒನ್ ಕೇಂದ್ರದಲ್ಲಿ ಪಾವತಿ: ‘ಬೆಳಗಾವಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸಂಚಾರ ನಿರ್ವಹಣಾ ಕೇಂದ್ರ ದಂಡ ವಿಧಿಸುತ್ತಿದೆ. ಡಿಜಿಟಲ್ ರೂಪದಲ್ಲಿ ದಂಡದ ಚಲನ್ ನೀಡಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘಿಸುವವರು ಇನ್ಮುಂದೆ ಬೆಳಗಾವಿ ಒನ್ ಕೇಂದ್ರಗಳಲ್ಲಿ ದಂಡ ಪಾವತಿಸಬೇಕಾಗುತ್ತದೆ’ ಎಂದು ಹೇಳಿದರು.

‘1930ಕ್ಕೆ ಕರೆ ಮಾಡಿ’

‘ಕಳೆದ ವರ್ಷ ಸೈಬರ್ ಅಪರಾಧಿಗಳು ಭಾರತೀಯರ ₹22 ಸಾವಿರ ಕೋಟಿ ದೋಚಿದ್ದಾರೆ. ಜನರು ಯಾವುದೇ ಆಮಿಷದ ಸಂದೇಶಗಳಿಗೆ ಬಲಿಯಾಗಬಾರದು. ಸದಾ ಜಾಗರೂಕರಾಗಿರಬೇಕು. ಒಂದುವೇಳೆ ತಿಳಿಯದೆ ವಂಚನೆಗೆ ಒಳಗಾದರೆ ಪೊಲೀಸರನ್ನು ಸಂಪರ್ಕಿಸಬೇಕು ಅಥವಾ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಬೇಕು’ ಎಂದು ಕಮಿಷನರ್ ತಿಳಿಸಿದರು.

‘ಅಪಘಾತಗಳನ್ನು ತಗ್ಗಿಸಲು ಕ್ರಮ’

‘ಸಂಚಾರ ಸಮಸ್ಯೆ ನೀಗಿಸಲು ಅತಿಕ್ರಮಣ ತೆರವುಗೊಳಿಸುತ್ತಿದ್ದೇವೆ. ಹೆಚ್ಚು ಅಪಘಾತ ಸಂಭವಿಸುವ ವಲಯಗಳನ್ನು ಗುರುತಿಸಿ, ಅಪಘಾತ ತಗ್ಗಿಸಲು ಕ್ರಮ ವಹಿಸುತ್ತಿದ್ದೇವೆ’ ಎಂದು ಬೊರಸೆ ಹೇಳಿದರು.

‘ಜಂಕ್ಷನ್ಗಳು ಮತ್ತು ವೃತ್ತಗಳಲ್ಲೇ ಇರುವ ಬಸ್ ನಿಲ್ದಾಣಗಳನ್ನು ಬೇರೆಡೆ ಸ್ಥಳಾಂತರಿಸಬೇಕಾಗುತ್ತದೆ. ಗುಂಡಿಗಳು ಬಿದ್ದಿರುವ ರಸ್ತೆಗಳನ್ನು ಸುಧಾರಿಸುವ ಕುರಿತು ಕ್ರಮ ವಹಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಹೆದ್ದಾರಿ ಪ್ರಾಧಿಕಾರ, ಬೆಳಗಾವಿ ಮಹಾನಗರ ಪಾಲಿಕೆ ಮತ್ತು ದಂಡು ಮಂಡಳಿಗೆ ಪತ್ರ ಬರೆದಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.