ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಶ್ರೀಗಂಧ ಕಟ್ಟಿಗೆ ಮಾರಾಟ: ಇಬ್ಬರು ಆರೋಪಿಗಳ ಬಂಧನ

Published 8 ಜುಲೈ 2023, 6:57 IST
Last Updated 8 ಜುಲೈ 2023, 6:57 IST
ಅಕ್ಷರ ಗಾತ್ರ

ಯಮಕನಮರಡಿ: ಶ್ರೀಗಂಧ ಕಟ್ಟಿಗೆಯನ್ನು ಪಾಶ್ಚಾಪುರದ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಅವರಿಂದ 14.660 ಕೆ.ಜಿ. ತೂಕದ ₹1.17 ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

‘ಬನ್ನಿಬಾಗಿ ಗ್ರಾಮದ ಮಹಾಂತೇಶ ಯಲ್ಲಪ್ಪ ನಾಯಿಕ ಎಂಬುವವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಗೋಕಾಕ ತಾಲ್ಲೂಕಿನ ಖನಗಾಂವ ಗ್ರಾಮದ ನಿವಾಸಿ ವಿಠಲ ಬಸವಣ್ಣೆಪ್ಪಾ ತಿಗಡಿ ಹಾಗೂ ಲಕ್ಷ್ಮಣ ಶಂಕರ ಡಬ್ಬಗೋಳ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹50 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯಮಕನಮರಡಿ: ಶ್ರೀಗಂಧ ಕಟ್ಟಿಗೆಯನ್ನು ಇಬ್ಬರು ಆರೋಪಿತರ ಮಾರಾಟ ಮಾಡುವ ಸಲುವಾಗಿ ಹಿರೋ ಸ್ಪಲೆಂಡರ್ ಪ್ಲಸ್ ಮೋಟಾರ ಸೈಕಲ್ ಕೆಎ-49/ಇಎ-3519 ನೇದ್ದರ ಮೇಲಿಂದ ಅಂಕಲಗಿ ಕಡೆಯಿಂದ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಪೈ ಹೊಟೇಲ್ ಹತ್ತಿರ ತೆಗೆದುಕೊಂಡು ಬನ್ನಿಬಾಗಿ ಗ್ರಾಮದ ಮಹಾಂತೇಶ ಯಲ್ಲಪ್ಪ ನಾಯಿಕ ಇತನಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಇಬ್ಬರು ಆರೋಪಿರಾದ ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ನಿವಾಸಿ ವಿಠಲ ಬಸವಣ್ಣೆಪ್ಪಾ ತಿಗಡಿ ಲಕ್ಷ್ಮಣ ಶಂಕರ ಡಬ್ಬಗೋಳ ಹಾಗೂ ದ್ವಿಚಕ್ರ ವಾಹನವನ್ನು ಹಾಗೂ 14 ಕಿಲೋ 660 ಗ್ರಾಂ ತೂಕದ ಶ್ರೀಗಂಧದ ಕಟ್ಟಿಗೆಯ ತುಂಡುಗಳು 1,17,280 ರೂ ಹಾಗೂ 50 ಸಾವಿರ ದ್ವಿಚಕ್ರ ವಾಹನ ವಶಕ್ಕೆ ಪಡದುಕೊಂಡಿದ್ದಾರೆ. ಪೊಲೀಸ್ರ ಕಾರ್ಯ ಯಶ್ವಸಿಯಾಗಿದೆ. ಈ ಪ್ರಕರಣ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT