ಮಂಗಳವಾರ, ಜನವರಿ 21, 2020
27 °C

ವಾಸ್ಕೊ–ಬೆಳಗಾವಿ ರೈಲು ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಗೋವಾ–ಬೆಳಗಾವಿ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಆರಂಭಿಸಿರುವ ವಾಸ್ಕೋ ಡ ಗಾಮ – ಬೆಳಗಾವಿ – ವಾಸ್ಕೋಡಗಾಮ ವಿಶೇಷ ರೈಲು ‌ಸಂಚಾರವನ್ನು ಮುಂದುವರಿಸಲಾಗಿದೆ.

ವಾರದಲ್ಲಿ 2 (ಶುಕ್ರವಾರ ಹಾಗೂ ಶನಿವಾರ) ದಿನಗಳು ಸಂಚರಿಸುತ್ತಿದ್ದ ಈ ರೈಲು ಹಿಂದಿನ ವೇಳಾಪಟ್ಟಿ ‍ಪ್ರಕಾರ ಜ.11ಕ್ಕೆ ಅಂತ್ಯಗೊಂಡಿತ್ತು. ಸೇವೆಯನ್ನು ಜ. 17ರಿಂದ ಫೆ. 15ರವರೆಗೆ ಮುಂದುವರಿಸಲಾಗಿದೆ. ಸಮಯ ಹಾಗೂ ನಿಲುಗಡೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಹಸಿರುನಿಶಾನೆ ತೋರಿದ್ದ ಈ ರೈಲನ್ನು ಮೂರು ತಿಂಗಳ ನಂತರವೂ ಮುಂದುವರಿಸುವ ಕುರಿತು, ಪ್ರಯಾಣಿಕರ ಬೇಡಿಕೆ ಆಧರಿಸಿ ನಿರ್ಧರಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು