ಬೆಳಗಾವಿ: ತಡವಾಗಿ ವಿಸರ್ಜನೆಗೆ ತೆರಳುತ್ತಿರುವ ಇಲ್ಲಿನ ಚವಾಟ್ ಗಲ್ಲಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ಮಂಗಳವಾರ ಬೆಳಿಗ್ಗೆ ತಡೆದಿದ್ದಾರೆ.
ಸಾಂಪ್ರದಾಯಿಕ ಮಾರ್ಗ ಬಿಟ್ಟು, ಬೇರೆ ಮಾರ್ಗದಲ್ಲಿ ಹೋಗಿ ವಿಸರ್ಜಿಸುವಂತೆ ಹೇಳುತ್ತಿದ್ದಾರೆ.
ಇದರಿಂದ ಆಕ್ರೋಶಗೊಂಡ ಚವಾಟ್ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಪ್ರತಿಭಟನೆ ಆರಂಭಿಸಿದ್ದಾರೆ.
'ಬೇರೆ ಮಾರ್ಗದಲ್ಲಿ ಹೋಗಿ ಮೂರ್ತಿ ವಿಸರ್ಜನೆ ಮಾಡುವುದಿಲ್ಲ.
ಪ್ರತಿವರ್ಷ ಹೋಗುವ ಮಾರ್ಗದಲ್ಲಿ ಅವಕಾಶ ಕೊಡಬೇಕು' ಎಂದು ಪಟ್ಟು ಹಿಡಿದಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮೆರವಣಿಗೆ ಆರಂಭ:
ಸಾಂಪ್ರದಾಯಿಕ ಮಾರ್ಗದಲ್ಲೇ ಪೊಲೀಸರು ಅವಕಾಶ ಕೊಟ್ಟಿದ್ದರಿಂದ ಚವಾಟ್ ಗಲ್ಲಿಯ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಕೆಲಹೊತ್ತಿನ ಬಳಿಕ ಆರಂಭವಾಯಿತು.
ಪೊಲೀಸ್ ಭದ್ರತೆಯಲ್ಲೇ ಕಚೇರಿ ಗಲ್ಲಿ ಮಾರ್ಗವಾಗಿ, ಕಪಿಲೇಶ್ವರ ದೇವಸ್ಥಾನದ ಹೊಂಡದತ್ತ ಮೆರವಣಿಗೆ ಸಾಗಿತು.