ಬೆಳಗಾವಿ: ರಾಜಸ್ಥಾನದ ಜೈಪುರದಲ್ಲಿ ಜೈನ ಸೋಷಿಯಲ್ ಗ್ರೂಪ್ ಕೇಂದ್ರೀಯ ಸಂಸ್ಥಾನ ಹಾಗೂ ನವದೆಹಲಿಯ ಮಹರ್ಷಿ ದಾದಿಚಿ ದೇಹದಾನ ಸಮಿತಿ ಆಶ್ರಯದಲ್ಲಿ ಆ.16ರಿಂದ 18ರ ವರೆಗೆ ನಡೆಯಲಿರುವ ರಾಷ್ಟ್ರೀಯ ದೇಹದಾನ ಮತ್ತು ಅಂಗಾಂಗ ದಾನ ಜಾಗೃತಿಯ ಸಮಾವೇಶಕ್ಕೆ ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಆಯ್ಕೆಯಾಗಿದ್ದಾರೆ.