ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಕಾಕ | ಒಂದೇ ಕುಟುಂಬದ 23 ಸದಸ್ಯರ ರಕ್ತದಾನ

Published 22 ಆಗಸ್ಟ್ 2024, 16:01 IST
Last Updated 22 ಆಗಸ್ಟ್ 2024, 16:01 IST
ಅಕ್ಷರ ಗಾತ್ರ

ಗೋಕಾಕ: ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಹಾಗೂ ಪ್ರಭಾ ಶುಗರ್ ನಿರ್ದೇಶಕರಾಗಿದ್ದ ತಾಲ್ಲೂಕಿನ ಬಡಿಗವಾಡ ಗ್ರಾಮದ ದುಂಡಪ್ಪ ಮಲ್ಲಪ್ಪ ಚೌಕಶಿ ಸ್ಮರಣಾರ್ಥ ಡಿ.ಎಂ. ಚೌಕಶಿ ಪ್ರತಿಷ್ಠಾನ, ರೋಟರಿ ರಕ್ತ ಭಂಡಾರ ಹಾಗೂ ರೋಟರಿ ಸೇವಾ ಸಂಘದಿಂದ ಬುಧವಾರ ಒಂದೆ ಕುಟುಂಬದ 23 ಜನ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಚೌಕಾಶಿ ಕುಟುಂಬದ 108 ಜನರ ಪೈಕಿ ಮಕ್ಕಳು ಹಾಗೂ ಹಿರಿಯರನ್ನು ಹೊರತುಪಡಿಸಿ ಉಳಿದವರು ಹಾಗೂ ಅವರ ಅಭಿಮಾನಿಗಳು ರಕ್ತದಾನ ಮಾಡಿದರು.

ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ರಾಜಕೀಯ  ಮುಖಂಡ ಅಶೋಕ ಪುಜೇರಿ, ಘಟಪ್ರಭಾ ಇನ್‌ಸ್ಪೆಕ್ಟರ್ ಬಸವರಾಜ ಕಾಮನಬೈಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜು ಕತ್ತಿ, ಕುಮಾರ ಚೌಕಶಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಈರಪ್ಪ ಸಂಪಗಾರ, ನಿಂಗಣ್ಣ ಮಾಳ್ಯಾಗೊಳ, ನಿಂಗಪ್ಪ ಕಮತಿ, ರೋಟರಿ ರಕ್ತ ಭಂಡಾರದ ಸೋಮಶೇಖರ ಮಗದುಮ್ಮ, ಬಸವರಾಜ ಹುಳ್ಳೆರ, ಸುರೇಶ ಬಿರಾದಾರ ಪಾಟೀಲ, ಸಹೋದರಾದ ಕಲ್ಲಪ್ಪ ಚೌಕಶಿ, ಕೆಂಪಣ್ಣ ಚೌಕಶಿ ಪುತ್ರರಾದ ವಕೀಲ ಮಲ್ಲಿಕಾರ್ಜುನ ಚೌಕಶಿ, ಯಲ್ಲಾಲಿಂಗ ಚೌಕಶಿ, ಶಿವಾನಂದ ಚೌಕಶಿ, ನಾಗರಾಜ ಚೌಕಶಿ ಹಲವರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT