ಬುಧವಾರ, ಆಗಸ್ಟ್ 10, 2022
25 °C
ನೇಣುಹಾಕಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

ಮುಖ್ಯರಸ್ತೆ ಬದಿಯೇ ನೇತಾಡಿದ ಶವ: ಹೌಹಾರಿದ ವಾಯುವಿಹಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಶಾಹೂನಗರದ ಕೊನೆಯ ಬಸ್ ನಿಲ್ದಾಣದ ಸಮೀಪ ಅಪಾರ್ಟ್‌ಮೆಂಟಿನ ಗ್ಯಾಲರಿಗೆ ನೇತುಹಾಕಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಗುರುವಾರ  ಪತ್ತೆಯಾಗಿದೆ.

ಶಿವಾಜಿ ಟಿ. ಭಿರ್ಜೆ (35) ಸಾವಿಗೀಡಾದವರು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದೆ. ತನಿಖೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವ ದೊರೆತ ಅಪಾರ್ಟ್‌ಮೆಂಟಿನಲ್ಲೇ ಈ ವ್ಯಕ್ತಿ ಕುಟುಂಬ ಸಮೇತ ಹಲವು ವರ್ಷಗಳಿಂದ ಬಾಡಿಗೆ ಕರಾರಿನ ಮೇಲೆ ವಾಸವಾಗಿದ್ದರು.

ಗುರುವಾರ ಬೆಳಿಗ್ಗೆ ವಾಯು ವಿಹಾರಕ್ಕೆ ಬಂದವರು ವ್ಯಕ್ತಿಯ ಶವ ನೇತಾಡುವುದನ್ನು ಕಂಡು ಹೌಹಾರಿದರು. ಬಳಿಕವೇ ಅವರ ಕುಟುಂಬಕ್ಕೆ ಗೊತ್ತಾಯಿತು.  ಸ್ಥಳದಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.

ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು