ಗುರುವಾರ , ಸೆಪ್ಟೆಂಬರ್ 23, 2021
25 °C

‘ಪುಸ್ತಕಗಳು ಒಳ್ಳೆಯ ಗೆಳೆಯರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಉತ್ತಮ ಪುಸ್ತಕಗಳು ನಮಗೆ ಸರಿಯಾದ ಮಾರ್ಗದರ್ಶನ ನೀಡುತ್ತವೆ. ನಿಜವಾದ ಸ್ನೇಹಿತರಾಗುತ್ತವೆ. ಹೀಗಾಗಿ, ಓದಿಗೆ ಸರಿಸಾಟಿಯಾದುದು ಯಾವುದೂ ಇಲ್ಲ’ ಎಂದು ಭರತೇಶ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಪ್ರೇಮಚಂದ ಲೇಂಗಡೆ ಹೇಳಿದರು.

ಇಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಸಿನೆಸ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪುಸ್ತಕಗಳು ಮನುಷ್ಯನಿಗೆ ಬೇರೆ ಬೇರೆ ರೀತಿಯ ಅನುಭವಗಳನ್ನು ನೀಡುತ್ತವೆ. ನಾನು ಇವತ್ತಿಗೂ ಪುಸ್ತಕಗಳನ್ನು ಕೊಳ್ಳುತ್ತೇನೆ. ಓದುತ್ತೇನೆ. ಓದಿದ ನಂತರ ಅದರಲ್ಲಿನ ವಿಷಯ ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದರಲ್ಲಿ ಸಿಗುವ ಆನಂದ ಬೇರಾವುದರಲ್ಲೂ ಕಂಡಿಲ್ಲ’ ಎಂದರು.

ಗ್ಲೋಬಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷ ವಿನೋದ್ ದೊಡ್ಡಣ್ಣವರ ಮಾತನಾಡಿ, ‘ವಿದ್ಯಾರ್ಥಿಗಳು ಪುಸ್ತಕಗಳಿಂದ ಪ್ರಯೋಜನ ಪಡೆದುಕೊಳ್ಳಬೇಕು. ಓದಿದರೆ ಮಾತ್ರ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ವೃತ್ತಿ ಜೀವನದ ಏಳಿಗೆಗೂ ಅವು ಸಹಕಾರಿಯಾಗಿವೆ’ ಎಂದು ತಿಳಿಸಿದರು.

ಭರತೇಶ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಪ್ರಕಾಶ ದೊಡ್ಡಣ್ಣವರ, ಶ್ರೀಪಾಲ ಖೇಮಲಾಪುರೆ, ಭೂಷಣ ಮಿರ್ಜಿ, ಮಹಾವೀರ ಉಪಾಧ್ಯೆ, ಅನುಪಮಾ ಶಿರಹಟ್ಟಿ, ಪ್ರಾಧ್ಯಾಪಕ ಎ.ಆರ್. ರೊಟ್ಟಿ, ನಿರ್ದೇಶಕ ಪ್ರಸಾದ ದಡ್ಡಿಕರ, ಸಹಾಯಕ ಗ್ರಂಥಪಾಲಕಿ ಜ್ಯೋತಿ ಪಾಟೀಲ ಇದ್ದರು.

ಕರ್ಮವೀರ ಭಾವುರಾವ ಪಾಟೀಲ ಗ್ರಂಥಾಲಯದ ಗ್ರಂಥಪಾಲಕ ಭರತ ಅಲಸಂದಿ ಸ್ವಾಗತಿಸಿದರು. ಸ್ವಾತಿ ಜೋಗ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು