ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4, 6ನೇ ವಾರ್ಡ್‌ ಮಹಿಳೆಯರಿಗೆ ಮೀಸಲು

Last Updated 12 ಡಿಸೆಂಬರ್ 2019, 11:15 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ದಂಡು ಮಂಡಳಿ ವ್ಯಾಪ್ತಿಯ ವಾರ್ಡ್‌ಗಳಿಗೆ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ 4 ಮತ್ತು 6ನೇ ವಾರ್ಡ್‌ಗಳನ್ನು ಮಹಿಳಾ ಮೀಸಲು ಎಂದು ಗುರುವಾರ ಘೋಷಿಸಲಾಯಿತು. ಲಾಟರಿ ಎತ್ತುವ ಪ್ರಕ್ರಿಯೆಯ ಮೂಲಕ ಮೀಸಲಾತಿ ನಿಗದಿಪಡಿಸಲಾಯಿತು.

ಮಂಡಳಿ ಅಧ್ಯಕ್ಷರೂ ಆದ ಮರಾಠ ಲಘು ಪದಾತಿ ದಳದ (ಎಂಎಲ್ಐಆರ್‌ಸಿ) ಬ್ರಿಗೇಡಿಯರ್ ಗೋವಿಂದ ಕಲ್ವಾಡ, ಸಿಇಒ ಬರ್ಚಸ್ವ ಹಾಗೂ ಸದಸ್ಯರ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯಿತು.

ಮಂಡಳಿ ವ್ಯಾಪ್ತಿಯಲ್ಲಿ 7 ವಾರ್ಡ್‌ಗಳಿವೆ. 10ಸಾವಿರಕ್ಕೂ ಹೆಚ್ಚಿನ ಮತದಾರರಿದ್ದಾರೆ. ಹೋದ ಚುನಾವಣೆಯಲ್ಲಿ 2 ಮತ್ತು 5ನೇ ವಾರ್ಡ್‌ಗಳಿಗೆ ಮಹಿಳಾ ಮೀಸಲಾತಿ ಘೋಷಣೆಯಾಗಿತ್ತು. ಆ ಸದಸ್ಯರ ಅಧಿಕಾರವಧಿ 2020ರ ಫೆ.10ಕ್ಕೆ ಮುಕ್ತಾಯವಾಗಲಿದೆ. ಸದ್ಯ 7ನೇ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. 1, 3, 4 ಮತ್ತು 6ನೇ ವಾರ್ಡ್‌ಗಳ ಪೈಕಿ 2 ವಾರ್ಡ್‌ಗಳಿಗೆ ಲಾಟರಿ ಎತ್ತುವ ಮೂಲಕ ಮಹಿಳಾ ಮೀಸಲಾತಿ ನಿಗದಿಪಡಿಸುವಂತೆ ಸರ್ಕಾರ ಆದೇಶಿಸಿತ್ತು. ನಿಯಮಾನುಸಾರ ಪ್ರಕ್ರಿಯೆ ನಡೆದಿದೆ. ಚುನಾವಣೆ ದಿನಾಂಕ ಅಂತಿಮವಾಗಿಲ್ಲ ಎಂದು ಸಿಇಒ ಬರ್ಚಸ್ವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT