ಬೆಳಗಾವಿ: ರಾಜಸ್ಥಾನದ ಕೋಟಾದ ಪ್ರಮುಖ ಶಿಕ್ಷಣ ಸಂಸ್ಥೆಯಾದ ‘ಕರಿಯರ್ ಪಾಯಿಂಟ್’ ತನ್ನ ಹೊಸ ಶಾಖೆಯನ್ನು ಇಲ್ಲಿನ ತಿಲಕವಾಡಿಯ ಸೋಮವಾರಪೇಟೆಯಲ್ಲಿ ಆರಂಭಿಸಿದೆ. ಐಐಟಿ, ಜೆಇಇ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದೆ.
ಶಾಖೆ ಉದ್ಘಾಟಿಸಿದ ಕಾಡಾ ಅಡಳಿತಾಧಿಕಾರಿ ಶಶಿಧರ ಕುರೇರ, ‘ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ನಿಟ್ಟಿನಲ್ಲಿ ಈ ಶಾಖೆಯಿಂದ ಪ್ರಯೋಜನ ಪಡೆದುಕೊಳ್ಳಬೇಕು. ಉತ್ತಮ ತರಬೇತಿ ಪಡೆದು ಉನ್ನತ ಶಿಕ್ಷಣ ಹೊಂದಬೇಕು’ ಎಂದು ಸಲಹೆ ನೀಡಿದರು.
ಬೆಳಗಾವಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಡಿಸಿಪಿ ವಿಕ್ರಂ ಅಮಟೆ, ಶಿಕ್ಷಣ ತಜ್ಞ ರಾಜ್ ಬೆಳಗಾಂವಕರ, ಮುಖಂಡರಾದ ಡಾ.ರವಿ ಪಾಟೀಲ, ವೀರೇಶ ಕಿವಡಸಣ್ಣವರ, ಶಾಖೆಯ ನಿರ್ದೇಶಕ ಬಾಲಚಂದ್ರ ಬಾಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.