ಸೋಮವಾರ, ಮಾರ್ಚ್ 8, 2021
32 °C

ಕೋವಿಡ್‌–19 ಸೋಂಕಿತರ ಹೆಸರು ಬಹಿರಂಗ: ಫೇಸ್‌ಬುಕ್‌ ಪೇಜ್‌ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೇಸ್‌ಬುಕ್‌ ಪುಟ

ಬೆಳಗಾವಿ: ಕೋವಿಡ್-19 ಸೋಂಕಿತರ ಹೆಸರು ಬಹಿರಂಗಪಡಿಸಿರುವ ಫೇಸ್‌ಬುಕ್‌ ಪೇಜ್ ‘ಮಾರ್ವಲಸ್‌ ಬೆಳಗಾಮ್‌’ ವಿರುದ್ಧ ಇಲ್ಲಿನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಏಪ್ರಿಲ್‌ 30ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ ಇಬ್ಬರು ಕೋವಿಡ್-19 ಸೋಂಕಿತ ಮಹಿಳೆಯರ (ಪಿ-149, ಪಿ-147) ಹೆಸರುಗಳನ್ನು ಈ ಫೇಸ್‌ಬುಕ್‌ ಪೇಜ್‌ನಲ್ಲಿ ಬಹಿರಂಗಪಡಿಸಲಾಗಿತ್ತು.

ಕರ್ನಾಟಕ ಎಪಿಡೆಮಿಕ್‌ ಡಿಸೀಸಸ್‌ ಕೋವಿಡ್‌–19 ರೆಗ್ಯುಲೇಷನ್ಸ್‌ 2020 ಪ್ರಕಾರ, ಸೋಂಕಿತರ ಹೆಸರುಗಳನ್ನು ಬಹಿರಂಗಪಡಿಸುವಂತಿಲ್ಲ. ಈ ನಿಯಮಾವಳಿಯನ್ನು ಉಲ್ಲಂಘಿಸಿ, ಹೆಸರುಗಳನ್ನು ಪ್ರಕಟಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು