ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರ ಫುಟ್‌ಬಾಲ್: ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆ ಪ್ರಥಮ

ಸಿಬಿಎಸ್ಇ ದಕ್ಷಿಣ ವಲಯ
Last Updated 13 ಅಕ್ಟೋಬರ್ 2019, 13:01 IST
ಅಕ್ಷರ ಗಾತ್ರ

ಬೆಳಗಾವಿ: ಬೆಂಗಳೂರು ಪೂರ್ವದ ದೆಹಲಿ ಪಬ್ಲಿಕ್ ಸ್ಕೂಲ್ ತಂಡದವರು ಇಲ್ಲಿನ ಲವ್‌ಡೇಲ್‌ ಸೆಂಟ್ರಲ್‌ ಶಾಲೆಯಿಂದ ಆಯೋಜಿಸಿದ್ದ ಸಿಬಿಎಸ್ಇ ದಕ್ಷಿಣ ವಲಯ ಬಾಲಕಿಯರ ಫುಟ್‌ಬಾಲ್‌ ಟೂರ್ನಿ 19‌ ವರ್ಷ ವಯಸ್ಸಿನವರ ವಿಭಾಗದಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ 1–0 ಗೋಲುಗಳಿಂದ ಕೊಲ್ಹಾಪುರದ ಸಂಜಯ ಘೋಡಾವತ್ ಇಂಟರ್‌ನ್ಯಾಷನಲ್ ಸ್ಕೂಲ್ ತಂಡದವರನ್ನು ಸೋಲಿಸಿದರು. ಇಲ್ಲಿನ ಜೈನ್‌ ಹೆರಿಟೇಜ್‌ ಶಾಲೆ 3ನೇ ಹಾಗೂ ಲವ್ ಡೇಲ್ ಸೆಂಟ್ರಲ್‌ ಶಾಲೆ 4ನೇ ಸ್ಥಾನ ಗಳಿಸಿತು.

17 ವರ್ಷ ವಯಸ್ಸಿನವರ ವಿಭಾಗದಲ್ಲಿ ಮುಂಬೈನ ರೇಯಾನ್ ಇಂಟರ್‌ನ್ಯಾಷನಲ್ ಸ್ಕೂಲ್, ಪುಣೆಯ ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್, ಮಿಲೇನಿಯಮ್ ನ್ಯಾಷನಲ್ ಸ್ಕೂಲ್ ಹಾಗೂ ಮಹಾರಾಷ್ಟ್ರದ ವಾರ್ಧಾದ ಸ್ಕೂಲ್ ಆಫ್ ಸ್ಕಾಲರ್ಸ್‌ ತಂಡದವರು ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದರು.

ಫುಟ್ಬಾಲ್ ಆಟಗಾರ್ತಿ ಅಂಜಲಿ ಹಿಂಡಲಗೇಕರ್, ಸಿಬಿಎಸ್‌ಇ ವೀಕ್ಷಕ ಶ್ರೀನಿವಾಸ ದರ್ಶನ, ಸಂಜಯ ಘೋಡಾವತ್ ಇಂಟರ್‌ನ್ಯಾಷನಲ್ ಸ್ಕೂಲ್‌ ತರಬೇತುದಾರ ಅಮೀನ್, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಸಲಿಂಗಪ್ಪ ಅಗಸಗಿ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT