ಭಾನುವಾರ, ನವೆಂಬರ್ 1, 2020
19 °C

ಮೂವರ ಬಂಧನ: 8 ಕೆ.ಜಿ. 685 ಗ್ರಾಂ. ಮಾದಕ ವಸ್ತು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಿಸಿಐಬಿ ತಂಡದವರು ಇಲ್ಲಿನ ಕೃಷ್ಣದೇವರಾಯ ವೃತ್ತದಲ್ಲಿ ಅಂಗಡಿಯೊಂದರ ಮೇಲೆ ಗುರುವಾರ ದಾಳಿ ನಡೆಸಿ, ಹುಕ್ಕಾದಲ್ಲಿ ಹಾಕಿ ಸೇದುವ 8 ಕೆ.ಜಿ. 685 ಗ್ರಾಂ. ಮಾದಕ ವಸ್ತು ಮಿಶ್ರಿತ 193 ಪಾಕೆಟ್‌ಗಳು ಮತ್ತು ₹ 1,400 ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಕಾಸರಗೋಡಿನ ಮಂಜೇಶ್ವರ ಸೋಂಕಲ್ ಮೂಲದವರಾದ ಸುಭಾಷ್ ನಗರ 2ನೇ ಕ್ರಾಸ್‌ನ ಸಲೀಂ ಮುಂಡರಪಾಳಿ ಅಬ್ದುಲ್ಲಾ, ಮಹಮ್ಮದ್ಅಲಿ ಇಬ್ರಾಹಿಂ ಹಾಗೂ ಅಬುಬಕ್ಕರ್ ಮುಪ್ಪಿದ ಮೆಹಮೂದ ಅಡ್ಡತೋಟೆ ಬಂಧಿತರು.

ಇನ್‌ಸ್ಪೆಕ್ಟರ್‌ ಸಂಜೀವ ಎಂ. ಕಾಂಬಳೆ ಹಾಗೂ ಸಿಬ್ಬಂದಿ ಎಎಸ್‌ಐ ಬಿ.ಆರ್. ಮುತ್ನಾಳ, ಎ.ಕೆ. ಕಾಂಬಳೆ, ಟಿ.ಎನ್.  ಬಳಗನ್ನವರ, ಎಸ್‌.ಸಿ. ಕೋರೆ, ಎಸ್.ಎಸ್. ಪಾಟೀಲ, ಸಿ.ಜೆ. ಚಿನ್ನಪ್ಪಗೋಳ, ಎಂ.ಎಂ. ವಡೇಯರ ಈ ದಾಳಿ ನಡೆಸಿದ್ದಾರೆ.

ಸಿಇಎನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು