ಚನ್ನಮ್ಮನ ಕಿತ್ತೂರು (ಬೆಳಗಾವಿ): ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಆಯೋಜಿಸಿದ "ಅಮೃತ ಭಾರತಿಗೆ ಕನ್ನಡದಾರತಿ" ಕಾರ್ಯಕ್ರಮ ಅಂಗವಾಗಿ ಸಂಭ್ರಮದ ಮೆರವಣಿಗೆ ನಡೆಯಿತು.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ವೀರರಾಣಿ ಚನ್ನಮ್ಮನ ಪ್ರತಿಮೆಗೆ ಶಾಸಕ ಮಹಾಂತೇಶ ದೂಡ್ಡಗೌಡ್ರ ಅವರು ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಇಳಕಲ್ ಸೀರೆಯುಟ್ಟು, ಸಾಂಪ್ರದಾಯಿಕ ಆಭರಣ ಧರಿಸಿ ಬಂದ ಮಹಿಳೆಯರು ಪೂರ್ಣಕುಂಭ ಕಲಶ ಹೊತ್ತು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿದರು.

ಅವರ ಹಿಂದೆ ವಿವಿಧ ವಾದ್ಯತಂಡಗಳು ನಡೆದವು. ಡೊಳ್ಳು ಕಲಾವಿದರು, ಹಲಗೆಯವರು, ಝಾಂಝ್ ಪಥಕ್, ತಾಸೆಮೇಳದ ತಂಡಗಳು ಮೆರವಣಿಗೆಗೆ ಮೆರಗು ತಂದವು. ಇವರ ಮಧ್ಯೆ ಸಾಗಿದ ಭಾರತಮಾತೆಯ ಭಾವಚಿತ್ರವಿರುವ ವಾಹನಕ್ಕೆ ಜನ ಪುಷ್ಪಾರ್ಚನೆ ಮಾಡಿದರು.

ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರಧಾರಿಗಳಾಗಿ ಹಾಡುತ್ತ, ನಲಿಯುತ್ತ ಹೆಜ್ಜೆ ಹಾಕಿದರು.

ಗೊಂಬೆ ವೇಷಧಾರಿಗಳು ಮಾರ್ಗದುದ್ದಕ್ಕೂ ವಾದ್ಯಮೇಳಗಳ ಸದ್ದಿಗೆ ತಕ್ಕಂತೆ ಕುಣಿದು ರಂಜಿಸಿದರು.

ರಾಣಿ ಚನ್ನಮ್ಮನ ವೃತ್ತದಿಂದ ಆರಂಭವಾದ ಮೆರವಣಿಗೆ ಐತಿಹಾಸಿಕ ಕೋಟೆ ಆವರಣದವರೆಗೂ ನಡೆಯಿತು.

ಶಾಸಕ ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶೀಲ್ದಾರ್ ಸೋಮಪ್ಪ ಹಾಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ಕೂಡ ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.