ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ | ಮಳೆ: 20 ಸಾವಿರ ಕ್ಯುಸೆಕ್ ನೀರು ಹೆಚ್ಚಳ

Published 4 ಜುಲೈ 2024, 15:59 IST
Last Updated 4 ಜುಲೈ 2024, 15:59 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದ ಪರಿಣಾಮ ಕೃಷ್ಣಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ಬಳಿಯ ಕೃಷ್ಣಾ ನದಿಯಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರ ಕ್ಯುಸೆಕ್ ನೀರು ಹೆಚ್ಚಳವಾಗಿದೆ.

ಕೊಲ್ಹಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜ್‌ನಲ್ಲಿ ಗುರುವಾರ 37250 ಕ್ಯುಸೆಕ್, ದೂಧಗಂಗಾ ನದಿಯಿಂದ 9150 ಕ್ಯುಸೆಕ್ ಸೇರಿದಂತೆ ಕಲ್ಲೋಳ ಬ್ಯಾರೇಜ್ ಕೃಷ್ಣಾ-ದೂಧಗಂಗಾ ಸಂಗಮ ಸ್ಥಳದಲ್ಲಿ 46795 ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಬುಧವಾರ ಕಲ್ಲೋಳ ಬ್ಯಾರೇಜ್ ಬಳಿ 26680 ಕ್ಯುಸೆಕ್ ಹರಿಯುತ್ತಿದ್ದ ನೀರಿನ ಪ್ರಮಾಣ 24 ಗಂಟೆಯೊಳಗೆ 20115 ಕ್ಯುಸೆಕ್ ಹೆಚ್ಚಳವಾಗಿದೆ.

6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್ ನಲ್ಲಿ 3.98 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, 45080 ಕ್ಯುಸೆಕ್ ಒಳ ಹರಿವು ಇದ್ದು, 750 ಕ್ಯುಸೆಕ್ ಹೊರ ಹರಿವು ಇದೆ.

ನಿಪ್ಪಾಣಿ ತಾಲ್ಲೂಕಿನಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿರುವ ಬಾರವಾಡ-ಕುನ್ನೂರು ಕಿರು ಸೇತುವೆ ಜಲಾವೃತಗೊಂಡಿದೆ.

ಮಹಾ ಮಳೆಯಿಂದಾಗಿ 105 ಟಿಎಂಸಿ ಅಡಿ ಸಾಮರ್ಥ್ಯದ ಕೊಯ್ನಾ ಆಣೆಕಟ್ಟೆಯಲ್ಲಿ 24.31 ಟಿಎಂಸಿ ಅಡಿ, 13.50 ಟಿಎಂಸಿ ಅಡಿ ಸಾಮರ್ಥ್ಯದ ಧೂಮ ಆಣೆಕಟ್ಟೆಯಲ್ಲಿ 4.57 ಟಿಎಂಸಿ ಅಡಿ, 10.10 ಟಿಎಂಸಿ ಅಡಿ ಸಾಮರ್ಥ್ಯದ ಕಣೇರ ಅಣೆಕಟ್ಟೆಯಲ್ಲಿ 2.62 ಟಿಎಂಸಿ ಅಡಿ, 34.40 ಟಿಎಂಸಿ ಅಡಿ ಸಾಮರ್ಥ್ಯದ ವಾರಣಾ ಅಣೆಕಟ್ಟೆಯಲ್ಲಿ 13.26 ಟಿಎಂಸಿ ಅಡಿ, 25.40 ಟಿಎಂಸಿ ಅಡಿ ಸಾಮರ್ಥ್ಯದ ಕಾಳಮ್ಮವಾಡಿ ಅಣೆಕಟ್ಟೆಯಲ್ಲಿ 5.86 ಟಿಎಂಸಿ ಅಡಿ, 8.36 ಟಿಎಂಸಿ ಅಡಿ ಸಾಮರ್ಥ್ಯದ ರಾಧಾನಗರಿ ಅಣೆಕಟ್ಟೆಯಲ್ಲಿ 2.97 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದು
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT