ನಿವೃತ್ತ ಶಿಕ್ಷಕರಿಗೆ ಸನ್ಮಾನ
ಕಾಗವಾಡ: ಉಗಾರ ಜೈನ ಸಮಾಜದ ಕಾರ್ಯಾಲಯದಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಿತು. ಸಿದ್ದಲಿಂಗ ಶಿವಾಚಾರ್ಯ ವೇದಗಮ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಶ್ರೀಶೈಲ ಶಾಸ್ತ್ರೀ , ತಹಶೀಲ್ದಾರ್ ರವೀಂದ್ರ ಹಾದಿಮನಿ ಮಾತನಾಡಿದರು. ಇಒ ವೀರಣ್ಣ ವಾಲಿ, ಮೂಡಲಗಿ ಸಾಹಿತಿ ಸಂಗಮೇಶ ಗುಜಗೊಂಡ, ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಮದಭಾವಿ, ಸಿಡಿಪಿಒ ರವೀಂದ್ರ ಗುದಗೆನ್ನವರ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ಸಂಕಪಾಳ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ಭಾವಿ, ಅಣ್ಣಾಸಾಹೇಬ ದೇವಮೋರೆ, ದೈಹಿಕ ಶಿಕ್ಷಾಧಿಕಾರಿ ಎಮ್.ವೈ.ಪೂಜಾರಿ ಇದ್ದರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.