ಚಿಕ್ಕೋಡಿ: ತಾಲ್ಲೂಕಿನ ಕಲ್ಲೋಳ– ಯಡೂರ ನಡುವೆ ಕೃಷ್ಣಾ ನದಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ₹29 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬ್ಯಾರೇಜಿಗೆ ಇದೀಗ ಗೇಟ್ ಅಳವಡಿಸಲು ನೀರಾವರಿ ಇಲಾಖೆ ಮುಂದಾಗಿದೆ. ಆದರೆ, ಈವರೆಗೆ ಸಾಕಷ್ಟು ನೀರು ವ್ಯರ್ಥವಾಗಿ ಹರಿದುಹೋಗಿದೆ. ಅಧಿಕಾರಿ ವರ್ಗದ ಈ ವಿಳಂಬ ನೀತಿಗೆ ರೈತಾಪಿ ಜನ ಕೆಂಡಾಮಂಡಲವಾಗಿದ್ದಾರೆ.

ಮಳೆಗಾಲದ ಬಳಿಕ ಗೇಟ್ ಅಳವಡಿಕೆ ಕಾರ್ಯವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ನೀರಾವರಿ ಇಲಾಖೆಯ ಅಧಿಕಾರಿಗಳು ಈಗ ಬೆಲೆ ತೆತ್ತಬೇಕಿದೆ. ಕಳೆದ ನಾಲ್ಕು ತಿಂಗಳ ಹಿಂದೆಯೇ ಗೇಟ್ ಅಳವಡಿಕೆ ಮಾಡಿದ್ದಲ್ಲಿ ಬ್ಯಾರೇಜಿನ ಹಿನ್ನೀರು ಖಾಲಿಯಾಗುತ್ತಿರಲಿಲ್ಲ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬುವುದು ರೈತರ ಆರೋಪ.

ನಾಲ್ಕು ದಿನಗಳ ಹಿಂದೆ (ಜ.6) ಹಿಪ್ಪರಗಿ ಬ್ಯಾರೇಜಿನ 22ನೇ ಗೇಟ್ ತಾಂತ್ರಿಕ ತೊಂದರೆಯ ಕಾರಣದಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿದೆ. ಶಾಸಕ ಗಣೇಶ ಹುಕ್ಕೇರಿ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಪ್ರಯತ್ನದಿಂದ ನಿರ್ಮಾಣವಾಗಿರುವ ಕಲ್ಲೋಳ– ಯಡೂರ ಬ್ಯಾರೇಜಿನಲ್ಲಿ 0.6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

2021ರಲ್ಲಿ ಮಹಾ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬ್ಯಾರೇಜ್ ಮರು ನಿರ್ಮಾಣ ಕಾಮಗಾರಿಯು 2025ರ ಮೇ ತಿಂಗಳಲ್ಲಿ ಪೂರ್ಣಗೊಂಡಿದೆ. ನೂತನ ಬ್ಯಾರೇಜ್ 192 ಮೀಟರ್ ಉದ್ದ, 8.5 ಮೀಟರ್ ಎತ್ತರವಿದ್ದು, 32 ಸ್ಲ್ಯಾಬ್ ಇದೆ. 64 ಗೇಟ್ ಅಳವಡಿಸುವ ಕೆಲಸ ಬಾಕಿ ಇತ್ತು. ಆದರೆ ನಿಗದಿತ ಸಮಯದಲ್ಲಿ ಗೇಟ್ ಅಳವಡಿಸದೆ ಇರುವುದರಿಂದ ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದ ಬಳಿಕ ಕಲ್ಲೋಳ– ಯಡೂರ ಬ್ಯಾರೇಜಿನಿಂದಲೂ ನೀರು ವ್ಯರ್ಥವಾಗಿ ಕೆಳಭಾಗಕ್ಕೆ ಹರಿದು ಹೋಗಿದೆ.

ಬೇಸಿಗೆ ಕಾಲದಲ್ಲಿ ಜನ ಜಾನುವಾರುಗಳಿಗೆ ಕುಡಿಯಲು, ಕೃಷಿಗೆ ಬಳಕೆಯಾಗಬೇಕಿದ್ದ ನೀರು ಇದೀಗ ವ್ಯರ್ಥವಾಗಿ ಹರಿದು ಹೋಗಿದ್ದರಿಂದ ಕಲ್ಲೋಳ– ಯಡೂರ ಬ್ಯಾರೇಜಿನ ಸುತ್ತಮುತ್ತಲಿನ ಗ್ರಾಮಗಳ ಜನರು ಆತಂಕಕ್ಕೊಳಗಾಗಿದ್ದಾರೆ. ಅಷ್ಟೇ ಅಲ್ಲದೇ, ಬ್ಯಾರೇಜಿನ ಹಿನ್ನೀರನ್ನು ಬಳಕೆ ಮಾಡಿಕೊಂಡು ಚಿಕ್ಕೋಡಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಬೇಸಿಗೆಯಲ್ಲಿ ನೀರು ಬೇಕಾದಲ್ಲಿ ಮಹಾರಾಷ್ಟ್ರದತ್ತ ಮುಖ ಮಾಡಬೇಕಿರುವುದು ಅನಿವಾರ್ಯವಾಗಿದೆ.

ಇದೀಗ ಗೇಟ್ ಅಳವಡಿಸಲು ನೀರಾವರಿ ಇಲಾಖೆ ಮುಂದಾಗಿದ್ದರೂ ಗೇಟ್ಗಳು ಗುಣಮಟ್ಟದಿಂದ ಕೂಡಿಲ್ಲ. ಬಳಸುವ ರಬ್ಬರ್ ಕೂಡ ಗಟ್ಟಿ ಮುಟ್ಟಾಗಿಲ್ಲ. ಗೇಟ್ ಗಾತ್ರ ಕೂಡ ತುಂಬಾ ಚಿಕ್ಕದಾಗಿದ್ದು, ನೀರು ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜಿನಿಂದಲೂ 2 ಟಿಎಂಸಿ ಅಡಿಗೂ ಹೆಚ್ಚು ನೀರು ಖಾಲಿಯಾಗಿದ್ದು, ಹಾಗೇನೇ ಕಲ್ಲೋಳ– ಯಡೂರ ಬ್ಯಾರೇಜಿನ ಹಿನ್ನೀರು ಹರಿದು ಹೋಗಿದ್ದರಿಂದ ಮೀನುಗಾರರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಗೇಟ್ ಅಳವಡಿಸುವ ಕಾರ್ಯವನ್ನು ನೀರಾವರಿ ಇಲಾಖೆ ಪೂರ್ಣಗೊಳಿಸಿದ್ದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜಾಪೂರೆ ಬ್ಯಾರೇಜಿನಿಂದ ಹರಿದು ಬರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಿದೆ.

ಬ್ಯಾರೇಜಿನಿಂದ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ 4 ದಿನಗಳಲ್ಲಿ ಸಾಕಷ್ಟು ನೀರು ವ್ಯರ್ಥವಾಗಿದೆ. ಬೇಸಿಗೆಯಲ್ಲಿ ಜನ ಜಾನುವಾರು ತೊಂದರೆಗೊಳಗಾಗುವ ಸಾಧ್ಯತೆ ಇದೆ
ಮಲ್ಲಪ್ಪ ಶೇಡಬಾಳೆ ರೈತ ಕಲ್ಲೋಳ

ಚಿಕ್ಕೋಡಿ ತಾಲ್ಲೂಕಿನ ನೀರಾವರಿ ಇಲಾಖೆಯ ಅಧಿಕಾರಿಗಳು ಹೊಸ ಗೇಟ್ ಅಳವಡಿಸಲು ಮುಂದಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ
ಅರುಣ ಕಮತೆ ಸ್ಥಳೀಯ ಕಲ್ಲೋಳ

ಬ್ಯಾರೇಜಿಗೆ ಅಳವಡಿಸಬೇಕಾದ ಎಲ್ಲ ಗೇಟ್ಗಳು ಸಿದ್ಧಗೊಂಡಿವೆ. ಅಳ ಎಂಜಿನಿಯರ್ ಕರ್ನಾಟಕ ನೀರಾವರಿ ನಿಗಮ ನಿಮಿತ ಚಿಕ್ಕೋಡಿ
ವಡಿಕೆ ಕೆಲಸವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಮಕರಂದ ಪೇಡನೇಕರ ಕಾರ್ಯನಿರ್ವಾಹಕ