ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕಲರಿಗೆ ಲೇಸನ್ನೇ ಬಯಸಿದ ಬಸವಣ್ಣ’

Published 10 ಮೇ 2024, 15:06 IST
Last Updated 10 ಮೇ 2024, 15:06 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ವಿಶ್ವಜ್ಯೋತಿ ಬಸವಣ್ಣನವರು ಸಮಾನತೆ ಸಾರಿದ ಹರಿಕಾರರು. ಸಕಲರಿಗೆ ಲೇಸನ್ನೇ ಬಯಸುವ ತಮ್ಮ ವಚನಗಳ ಮನುಕುಲದ ಅಂತರಂಗದ ಕಣ್ಣು ತೆರೆಸಿದವರು’ ಎಂದು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಪ್ರಕಾಶ ಜನಮಟ್ಟಿ ಹೇಳಿದರು.

ತಾಲ್ಲೂಕಿನ ಧುಳಗನವಾಡಿ ಗ್ರಾಮದಲ್ಲಿ ರಂಗದರ್ಶನ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಯಕ ತತ್ವ, ಜ್ಞಾನ ದಾಸೋಹ ಎಲ್ಲರಿಗೂ ಮಾರ್ಗಸೂಚಿಯಾಗಿದೆ. ಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು’ ಎಂದರು.

ಹಿರಿಯ ಕಲಾವಿದ ಬಾಬುಗೌಡ ಪಾಟೀಲ ಮಾತನಾಡಿ, ಬಸವಣ್ಣನವರು ರಚಿಸಿದ ವಚನಗಳು ಎಂದೆಂದಿಗೂ ದಾರಿದೀಪ ಎಂದರು.

ಕಾರ್ಯಕ್ರಮದಲ್ಲಿ ಅಪ್ಪಾಸಾಬ ಚಿಮನೆ, ಭರತ ಕಲಾಚಂದ್ರ, ಗುರುಪ್ರಸಾದ ಕಲಾಚಂದ್ರ ಉಪಸ್ಥಿತರಿದ್ದರು. ಸುಪ್ರಿಯಾ ಕಲಾಚಂದ್ರ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT